ಭಾನುವಾರ, ಅಕ್ಟೋಬರ್ 2, 2022
19 °C

ಕೊಟ್ಟಿಗೆಹಾರ: ಬೊಮ್ಮನಹಳ್ಳಿಯಲ್ಲಿ ಹುಲಿ ದಾಳಿಗೆ ಎತ್ತು ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಟ್ಟಿಗೆಹಾರ: ಬಣಕಲ್ ಹೋಬಳಿಯ ದೊಡ್ಡನಂದಿ ಗ್ರಾಮದ ಬೊಮ್ಮನಹಳ್ಳಿ ನಾರಾಯಣಗೌಡ ಅವರ ಎತ್ತಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ.

ಉಪ ವಲಯ ಅರಣ್ಯಾಧಿಕಾರಿ ಉಮೇಶ್, ಅರಣ್ಯ ರಕ್ಷಕ ಮೊಹಸೀನ್, ಜಾನುವಾರು ಅಧಿಕಾರಿ ಅಜೀಜ್ ಅಹಮ್ಮದ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಹುಲಿ ಸ್ಥಳಾಂತರಿಸಲು ಆಗ್ರಹ: ಎರಡು ವರ್ಷಗಳಿಂದ ಬಿ.ಹೊಸಹಳ್ಳಿ, ಹೊಕ್ಕಳ್ಳಿ, ಭಾರತೀಬೈಲ್, ಬಿಲ್ಲೋಟ ಭಾಗದಲ್ಲಿಹುಲಿ ಸಂಚರಿಸುತ್ತಿದ್ದು ಈವರೆಗೆ ಮೇಯಲು ಹೋಗಿದ್ದ ಹಲವು ದನಗಳು ಹುಲಿಯ ಪಾಲಾಗಿವೆ.  ಅರಣ್ಯ ಇಲಾಖೆ ಬಿ.ಹೊಸಳ್ಳಿ, ಬಾನಳ್ಳಿ, ಹೊಕ್ಕಳಿ ಭಾಗದಲ್ಲಿ ಕ್ಯಾಮೆರಾ ಕಣ್ಗಾವಲು ಇರಿಸಿ ಹುಲಿ ಸೆರೆ ಹಿಡಿಯಲು ಪ್ರಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದೆಡೆ ಕಾಡಾನೆ ಕಾಟ ಮತ್ತೊಂದೆಡೆ ಹುಲಿಯ ಭಯದಿಂದ  ಗ್ರಾಮಸ್ಥರು ದಿನದೂಡುವಂತಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹುಲಿ ಸ್ಥಳಾಂತರ ಮಾಡಿ ಜನರು ನೆಮ್ಮದಿಯಿಂದ ಬದುಕಲು ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.