ಶನಿವಾರ, ಜುಲೈ 2, 2022
22 °C

ಮೂಡಿಗೆರೆ ಸಮೀಪದ ಗಾಂಧೀ ಘರ್‌ನಲ್ಲಿ ಹೆದ್ದಾರಿಗೆ ಉರುಳಿದ ಮರ: ಸಂಚಾರ ಬಂದ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು:  ಜಿಲ್ಲೆಯ ವಿವಿಧೆಡೆ ಮಧ್ಯಾಹ್ನ ಮಳೆಯಾಗಿದೆ, ಗುಡುಗು–ಮಿಂಚಿನ ಆರ್ಭಟ ಇತ್ತು. ಮೂಡಿಗೆರೆ ತಾಲ್ಲೂಕಿನ ಗಾಂಧೀ ಘರ್‌ ಗ್ರಾಮದ ಸಮೀಪ ಹೆದ್ದಾರಿ ಬದಿಯ ವೃಕ್ಷವೊಂದು ನೆಲಕ್ಕುರುಳಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. 

ರಸ್ತೆಯ ಎರಡೂ ಕಡೆ ವಾಹನಗಳು ಸಾಲುಗಟ್ಟಿ ನಿಂತಿವೆ. ಬೇಲೂರು, ಸಕಲೇಶಪುರ, ಹಾಸನ ಹಾಗೂ ಮಂಗಳೂರು ಕಡೆಗಿನ ಸಂಚಾರ ಬಂದ್‌ ಆಗಿದೆ. 

ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಪಟ್ಟಣದ ವಾಹನ ನಿಲುಗಡೆ ಪ್ರದೇಶದಲ್ಲಿ ನೀರು ಆವರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು