ಕಳಸ: ವಿಶ್ವಹಿಂದೂ ಪರಿಷತ್ ಸ್ಥಾಪನೆಯಾಗಿ 60 ವರ್ಷ ಕಳೆದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಷಷ್ಠಿಪೂರ್ತಿ ಸಮಾರೋಪ ಸಮಾರಂಭ ನಡೆಯಿತು.
ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕಳಸೇಶ್ವರ ಸ್ವಾಮಿ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು. ರಾಧೆ ಮತ್ತು ಕೃಷ್ಣ ವೇಷಧಾರಿ ಮಕ್ಕಳು ಸಂಕೀರ್ಣ ಯಾತ್ರೆಯಲ್ಲಿ ಭಾಗವಹಿಸಿ ಮೆರುಗು ತುಂಬಿದರು.
ವಿಶ್ವ ಹಿಂದೂ ಪರಿಷತ್ ಶೃಂಗೇರಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಕುಮಾರ್, ವಿಎಚ್‍ಪಿ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಪ್ರಬೋಧಿನಿ ವಿದ್ಯಾ ಕೇಂದ್ರದ ಕಾರ್ಯದರ್ಶಿ ರಾಘವೇಂದ್ರ ಭಟ್ ಮಾತನಾಡಿದರು.
ದುರ್ಗಾವಾಹಿನಿ ಸಹ ಸಂಯೋಜಕಿ ಪಾರ್ವತಿ, ಮೈನಾ ಕುಲಾಕಲ್, ಮಾಲತಿ ರಾವ್, ಬಬ್ಬುಸ್ವಾಮಿ ದೇಗುಲದ ಗುರಿಕಾರ ಜಗನ್ನಾಥ್, ಆದಿವಾಸಿ ರಕ್ಷಣಾ ಪರಿಷತ್ ಕಾರ್ಯದರ್ಶಿ ಶ್ರೀನಿವಾಸ, ,ಬಜರಂಗದಳದ ಪದಾಧಿಕಾರಿ ಜಗದೀಶ್ ಭಟ್, ಅಜಿತ್ ಕುಲಾಲ್, ಸುಜಿಲ್, ಸಮಾಗಾರ ಸಮುದಾಯದ ಮೋಹನ ಭಾಗವಹಿಸಿದ್ದರು.