ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು ನಗರದಲ್ಲಿ ಆನೆ ಸುತ್ತಾಟ

Published 9 ಮೇ 2024, 23:59 IST
Last Updated 9 ಮೇ 2024, 23:59 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಆನೆಯೊಂದು ಚಿಕ್ಕಮಗಳೂರು ನಗರದ ಒಳಭಾಗಕ್ಕೆ ಬಂದು ಜಯನಗರದ ಬೀದಿಗಳಲ್ಲಿ ಸುತ್ತಾಡುವ ಮೂಲಕ ಆತಂಕ ಸೃಷ್ಟಿಸಿತು.

ಬೆಳಗಿನ ಜಾವ ವಾಯು ವಿಹಾರಕ್ಕೆ ಹೋಗುತ್ತಿದ್ದ ಜನರಿಗೆ ಆನೆ ಎದುರಾಗಿದೆ. ಕೂಡಲೇ ಎಲ್ಲರೂ ಮನೆ ಸೇರಿಕೊಂಡು ಆನೆ ಓಡಾಡುವ ವಿಡಿಯೊ ಮಾಡಿಕೊಂಡಿದ್ದಾರೆ. ಅರಣ್ಯ ಇಲಾಖೆಗೂ ಸುದ್ದಿ ಮುಟ್ಟಿಸಿದ್ದಾರೆ.

ಜಯನಗರದಿಂದ ಮತ್ತೆ ತೇಗೂರು ಕಡೆಗೆ ಹೋದ ಆನೆ ಈಗ ಕದ್ರಿಮಿದ್ರಿ ಅರಣ್ಯದಲ್ಲಿ ಸೇರಿದೆ. 10–12 ವರ್ಷದ ಮರಿಯಾನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

‘ಆನೆಗಳ ಹಿಂಡಿನಲ್ಲಿದ್ದ ಮರಿಯಾನೆ ತಪ್ಪಿಸಿಕೊಂಡು ಊರಿನತ್ತ ಬಂದಿದೆ. ಸದ್ಯ ಸುರಕ್ಷಿತ ಜಾಗದಲ್ಲಿದ್ದು, ಅದನ್ನು ಹಿಂಡಿನತ್ತ ಓಡಿಸಲಾಗುವುದು. ಜನ ಆತಂಕಗೊಳ್ಳುವುದು ಬೇಡ’ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT