ಸೋಮವಾರ, ಮಾರ್ಚ್ 27, 2023
31 °C

ಚಿಕ್ಕಮಗಳೂರು|ಕಾಡುಬೆಕ್ಕಿನ ಉಗುರು: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ವನ್ಯಜೀವಿಗಳ ಉಗುರು, ಹಲ್ಲುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸ್ ಅರಣ್ಯ ಸಂಚಾರಿ ದಳದ ಸಿಐಡಿ ಅಧಿಕಾರಿಗಳು ಮಾಲು ಸಮೇತ ಈಚೆಗೆ ವಶಕ್ಕೆ ಪಡೆದಿದ್ದಾರೆ.

ಕೊಪ್ಪ ತಾಲ್ಲೂಕು ಜಯಪುರದ ಚಾಮುಂಡೇಶ್ವರಿ ಸಿಲ್ಕ್ ಬಟ್ಟೆಯ ಅಂಗಡಿಯ ಮಾಲೀಕ ಎಸ್ .ಬದರಿನಾರಾಯಣ ಪುರೋಹಿತ್ (50) ಬಂಧಿತ ಆರೋಪಿ. ನಗರದ ಬೋಳರಾಮೇಶ್ವರ ದೇವಸ್ಥಾನದ ಹತ್ತಿರ ಕಾಡುಬೆಕ್ಕಿನ ಒಂದು ಪಂಜಾ ಮತ್ತು ಹಲ್ಲುಗಳನ್ನು ಮಾರಾಟ ಮಾಡಲು ಬದರಿನಾರಾಯಣ ಗಿರಾಕಿಗಳಿಗೆ ಕಾಯುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದವರು ಆರೋಪಿಯಿಂದ ಕಾಡುಬೆಕ್ಕಿನ ಐದು ಉಗುರುಳ್ಳ ಒಂದು ಪಂಜಾ, ಕಾಡುಬೆಕ್ಕಿನ 4 ಹಲ್ಲುಗಳು, ಕಾಡು ಹಂದಿಯ 2 ಹಲ್ಲುಗಳನ್ನು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಕೆ.ವಿ.ಶರತ್ ಚಂದ್ರ, ಸಿಐಡಿ ಅರಣ್ಯ ಘಟಕದ ಪ್ರಭಾರ ಉಪ ಪೊಲೀಸ್ ಮಹಾನಿರ್ದೇಶಕ ಕೆ.ಬಿ.ವಿಶ್ವನಾಥ್ ಮಾರ್ಗದರ್ಶನದಲ್ಲಿ ಪೊಲೀಸ್ ಉಪನಿರೀಕ್ಷಕಿ ಕೆ.ಆರ್.ಸುನೀತಾ ನೇತೃತ್ವದಲ್ಲಿ ಸಿಬ್ಬಂದಿ ಡಿ.ಎಚ್.ದಿನೇಶ್, ಎಸ್.ಕೆ.ದಿವಾಕರ್, ಕೆ.ಎಸ್.ದಿಲೀಪ, ಎಚ್.ದೇವರಾಜ, ಎ.ಜೆ.ಹಾಲೇಶ, ವೈ ಹೇಮಾವತಿ, ಚಾಲಕ ತಿಮ್ಮ ಶೆಟ್ಟಿ ದಾಳಿಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು