ಕೊಪ್ಪ: ಪಟ್ಟಣ ಪಂಚಾಯಿತಿ ಆಸ್ತಿತೆರಿಗೆ ದರ ಪರಿಷ್ಕರಣೆ ಮಾಡದಿರಲು ನಿರ್ಧರಿಸಿದೆ.
ಪ.ಪಂ.ಅಧ್ಯಕ್ಷ ಉಮೇಶ್ಶೇಟ್ ಅಧ್ಯ ಕ್ಷತೆಯಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಭೀಮ ರಾಜು, ಪುರಸಭೆ ಕಾಯ್ದೆ ಪ್ರಕಾರ ಆಸ್ತಿತೆರಿಗೆ ದರವನ್ನು ಪ್ರತಿ 3 ವರ್ಷಗಳಿಗೊಮ್ಮೆ ಹೆಚ್ಚಿಸಲು ಕಡ್ಡಾಯವಾಗಿ ದರ ಪರಿಸ್ಕರಣೆ ಮಾಡಲು ಸೂಚಿಸಿದೆ ಎಂದು ಪ್ರಸ್ತಾಪಿಸಿದರು.

ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಎಂ.ಆರ್.ಕಣ್ಣನ್ ಪ್ರಸ್ತಾವವನ್ನು ತೀವ್ರವಾಗಿ ವಿರೋಧಿಸಿ, ಪಟ್ಟಣ ಪಂಚಾಯಿತಿ ಪುರಸಭೆ ಯಾಗಿ ಪರಿವರ್ತನೆಯಾಗಿಲ್ಲ. ಜನಸಂಖ್ಯೆ ತೀರ ಕಡಿಮೆ ಇರುವ ಪಂಚಾಯಿತಿಯಲ್ಲಿ ಆಡಳಿ ತಾಧಿಕಾರಿಗಳ ಅವಧಿಯಲ್ಲಿ ಆಸ್ತಿ ತೆರಿಗೆಯನ್ನು ನಿಗದಿತ ಪ್ರಮಾಣಕ್ಕಿಂತ ಅಧಿಕ ಏರಿಸಲಾಗಿದೆ.

ಶೇ.15ರಿಂದ 30ರಷ್ಟು ಹೆಚ್ಚಳ ಮಾಡ ಬೇಕೆಂಬ ಮಾರ್ಗಸೂಚಿಗಿಂತ ಪಂಚಾಯಿತಿ ದರ ಹೆಚ್ಚಳವಾಗಿರುವುದರಿಂದ ದರ ಪರಿಷ್ಕ ರಣೆ ಮಾಡಬಾರದೆಂದು ಆಗ್ರಹಿಸಿದರು.

ದರ ಪರಿಷ್ಕರಣೆ ಪ್ರಸ್ತಾವವನ್ನು ಕೈಬಿಡಲು ನಿರ್ಧರಿಸಿದ ಸಭೆ 2011-12ನೇ ಸಾಲಿನ ಶೇ.7.25ರ ಮೀಸಲು ಅನುದಾನ, ಶೇ.22. 75ರ ಮೀಸಲು ಅನುದಾನ, ಶೇ.3ರ ಅಂಗವಿಕಲರ ಅನುದಾನದ ಫಲಾನುಭವಿ ಪಟ್ಟಿಗಳನ್ನು ಪರಿಶೀಲಿಸಿ ಅಂತಿಮಗೊಳಿಸಿತು.

ಸ್ವಯಂ ಉದ್ಯೋಗ, ಮನೆ ದುರಸ್ತಿ, ತರಬೇತಿ, ವಿದ್ಯಾಭ್ಯಾಸಕ್ಕೆ ನೆರವು, ವೈದ್ಯಕೀಯ ನೆರವು, ಅಡುಗೆ ಅನಿಲ ಖರೀದಿ, ಕಂಪ್ಯೂಟರ್ ಮೊದಲಾದ ಸೌಲಭ್ಯಗಳನ್ನು ರೂ. 18ಲಕ್ಷ ದಲ್ಲಿ ಒದಗಿಸಲು 163 ಫಲಾನುಭವಿಗಳನ್ನು ಆಯ್ಕೆಮಾಡಲಾಯಿತು.

ಉಪಾಧ್ಯಕ್ಷೆ ವನಜ ತಂಗವೇಲು, ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿಸತೀಶ್, ಸದಸ್ಯರಾದ ದಿವಾಕರ್, ಕೆ.ವೈ.ರಮೇಶ್, ಕಿಶೋರ್ ಪೇಜಾ ವರ್, ಮಹಮದ್ಗೌಸ್, ಶ್ರೀಪತಿ ಪ್ರಭು, ಸುಧಾಕರಭಟ್, ಮೇಬಲ್ ಟೆರಿಸನ್, ಸುಶೀಲ, ಜಯಶ್ರೀ ನವಿಲೇಕರ್, ಅನುಸೂಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.