ತರೀಕೆರೆ: ತಾಲ್ಲೂಕಿನ 20 ಗ್ರಾಮಗಳಿಗೆ ಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ಶಾಸಕ ಡಿ.ಎಸ್.ಸುರೇಶ್ ತಿಳಿಸಿದರು.

ತಾಲ್ಲೂಕಿನ ಇಟ್ಟಿಗೆ ಗ್ರಾಮದಲ್ಲಿ ಪ್ರಸ್ತುತ ಯೋಜನೆಯ ಬೃಹತ್ ನೀರು ಸಂಗ್ರಹಣ ಕೇಂದ್ರದ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.ತಾಲ್ಲೂಕಿನ ಎಂ.ಸಿ.ಹಳ್ಳಿ ಬಳಿಯ ಗಂಟೆಕಣಿವೆಯ ಬಳಿ ಹರಿಯುವ ಭದ್ರಾ ಎಡದಂಡೆ ನಾಲೆಯಿಂದ ನೀರನ್ನು ಕೊಳವೆಯ ಮೂಲಕ ಇಟ್ಟಿಗೆ ಗ್ರಾಮದ ಬಳಿ ನಿರ್ಮಿಸಿರುವ 10 ಲಕ್ಷ ಕ್ಯೂಬಿಕ್ ಮೀಟರ್ ಮತ್ತು 12.900 ಚದರ ಮೀಟರ್ ವ್ಯಾಪ್ತಿಯ ನೀರು ಸಂಗ್ರಹಣ ಕೇಂದ್ರದಲ್ಲಿ ಪ್ರಕೃತಿದತ್ತವಾಗಿ ನೀರನ್ನು ಶುದ್ಧಿಕರಿಸಿ ರಾಗಿಬಸವನಹಳ್ಳಿಯ ವಿತರಣಾ ಟ್ಯಾಂಕಿಗೆ ನೀರನ್ನು ಹರಿಸಲಾಗುವುದು ಎಂದು ಅವರು ತಿಳಿಸಿದರು.

ತಾಲ್ಲೂಕಿನ ಬೇಲೇನಹಳ್ಳಿ, ರಾಗಿಬಸವನ ಹಳ್ಳಿ, ಗಣೇಶ್ಪುರ, ಇಟ್ಟಿಗೆ, ಅಮೃತಾಪುರ, ಸಮತಳ, ವಿಠ್ಠಲಾಪುರ, ನೇರಲಕೆರೆ, ಹಾದಿಕೆರೆ, ಲಕ್ಷ್ಮಿ ಸಾಗರ, ಎಚ್.ಮಲ್ಲೇನಹಳ್ಳಿ, ನಾಗೇನಹಳ್ಳಿ, ಕುಂಟಿನಮಡು, ನರಸೀಪುರ, ಹುಣಸಘಟ್ಟ ಮತ್ತು ಅಜ್ಜಂಪುರ ಹಾಗೂ ಇನ್ನಿತರೆ ಗ್ರಾಮಗಳಿಗೆ ಪ್ರಸ್ತುತ ಯೋ ಜನೆ ಯಿಂದ ಶಾಶ್ವತ ಕುಡಿಯುವ ನೀರನ್ನು ನೀಡಲಾ ಗು ತ್ತದೆ ಎಂದು ತಿಳಿಸಿದ ಅವರು ಈ ಸಂಬಂಧದ ಕಾಮ ಗಾರಿಗೆ ಅಡ್ಡಿಯಾಗಿದ್ದ ಅರಣ್ಯ ಇಲಾಖೆ ಮತ್ತು ಮೆಸ್ಕಾಂನಿಂದ ಅಧಿಕೃತ ಅನುಮತಿ ಪಡೆಯಲಾಗಿದೆ ಎಂದರು.

ಮೂರು ತಿಂಗಳ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದ ಅವರು, ಮಳೆ ಸರಿಯಾಗಿ ಬೀಳದ ಕಾರಣ ಜನತೆಯ ನೀರಿನ ಭವಣೆ ತೀರಿಸಲು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಂಬೈ ನೂರು ಆನಂದಪ್ಪ. ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ಆನಂದಪ್ಪ, ಎಪಿಎಂಸಿ ನಿರ್ದೇಶಕ ಶಿವಕುಮಾರ್, ಮುಖಂಡರಾದ ಕೆ.ಟಿ.ರವಿ, ವಸಂತ ಕುಮಾರ್, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಎಇಇ ಗಣೇಶ್, ಎಇ ಲಿಂಗಪ್ಪ ಮತ್ತು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.