ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರಿನಲ್ಲಿ ಕೈಗಾರಿಕಾ ಘಟಕಕ್ಕೆ ಕ್ರಮ: ಜಿಲ್ಲಾಧಿಕಾರಿ ಕವಿತಾ

ಎತ್ತಿನಬಂಡಿಯಲ್ಲಿ ಜಿಲ್ಲಾಧಿಕಾರಿ ಮೆರವಣಿಗೆ
Last Updated 28 ಮೇ 2022, 3:13 IST
ಅಕ್ಷರ ಗಾತ್ರ

ಮೊಳಕಾಲ್ಮುರು: ‘ಎಲ್ಲ ಸೌಲಭ್ಯಗಳಿಗೆ ಸರ್ಕಾರದ ಕಡೆ ಮುಖ ಮಾಡುವುದು ಸರಿಯಲ್ಲ, ಸರ್ಕಾರ ಮತ್ತು ದೇಶಕ್ಕೆ ನಮ್ಮ ಕೊಡುಗೆ ಏನು ಎಂಬ ಬಗ್ಗೆ ಪ್ರತಿಯೊಬ್ಬರೂಮನವರಿಕೆ ಮಾಡಿಕೊಳ್ಳಬೇಕು. ಪರಿಸರ ಮತ್ತು ಸರ್ಕಾರದ ಆಸ್ತಿಗಳನ್ನು ಕಾಪಾಡುವುದು ಎಲ್ಲರ ಹೊಣೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನೀಕೇರಿ ಹೇಳಿದರು.

ತಾಲ್ಲೂಕಿನ ನೇರ್ಲಹಳ್ಳಿಯಲ್ಲಿ ಶುಕ್ರವಾರ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜನರಿಗೆ ಸೌಲಭ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ಸಾಕಷ್ಟು ಕೆಲಸ ಮಾಡುತ್ತಾರೆ. ಕೆಲವು ಬಾರಿ ಸರ್ಕಾರ ರೂಪಿಸಿರುವ ತಾಂತ್ರಿಕ ಕಾರಣಗಳು ಅಡ್ಡಿಯಾಗುತ್ತವೆ. ನೇರ್ಲಹಳ್ಳಿಗೆ ಸರ್ಕಾರಿ ಪ್ರೌಢಶಾಲೆ ಮಂಜೂರು ವಿಷಯದಲ್ಲಿ ಇದು ಸ್ಪಷ್ಟವಾಗಿದೆ. ತಾಲ್ಲೂಕಿನಲ್ಲಿ ಕೈಗಾರಿಕಾ ಘಟಕ ಸ್ಥಾಪಿಸಬೇಕು ಎಂಬ ಬೇಡಿಕೆ ಬಂದಿದೆ. ಸೂಕ್ತವಾದ 500 ಎಕರೆ ಸರ್ಕಾರಿ ಪ್ರದೇಶವನ್ನು ಗುರುತಿಸಿ ಕೊಟ್ಟಲ್ಲಿ ಸ್ಥಾಪಿಸಲು ಜಿಲ್ಲಾಡಳಿತ ಶಿಫಾರಸು ಮಾಡಲಿದೆ. ಈ ಬಗ್ಗೆ ವರದಿಸಲ್ಲಿಸಬೇಕು’ ಎಂದು ತಹಶೀಲ್ದಾರ್‌ಗೆ ಸೂಚಿಸಿದರು.

ಸರ್ಕಾರದ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಇವುಗಳನ್ನು ಜನರು ಸದುಪಯೋಗ ಮಾಡಿಕೊಂಡಲ್ಲಿ ಮಾತ್ರ ಕಾರ್ಯಕ್ರಮಕ್ಕೆನಿಜವಾದ ಅರ್ಥ ಸಿಗಲಿದೆ. ಇಲ್ಲವಾದಲ್ಲಿ ಡಿಸಿ ಬಂದರು, ಹೋದರು ಎಂಬ ಮಾತುಗಳು ಬರುತ್ತವೆ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿಯನ್ನು ಎಕೆ ಕಾಲೊನಿ ಸರ್ಕಾರಿ ಪ್ರಾಥಮಿಕ ಶಾಲೆ ಮುಂಭಾಗದಿಂದ ಎತ್ತಿನಬಂಡಿಯಲ್ಲಿ ಕೂರಿಸಿ ‌ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.

ನಂತರ ಜಿಲ್ಲಾಧಿಕಾರಿಳು ಪಶು ಇಲಾಖೆಯ ಪಶು ಸಂಜೀವಿನಿ ವಾಹನ ಸೇವೆ ಸೌಲಭ್ಯ, ಕೃಷಿ ಇಲಾಖೆಯ ಸಂಚಾರ ಮಣ್ಣು ಪರೀಕ್ಷಾ ವಾಹನ ಸೇವೆಗೆ‌ ಚಾಲನೆ ನೀಡಿದರು. ನಂತರ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಗಳ ವಸ್ತು ಪ್ರದರ್ಶನಗಳನ್ನು ಉದ್ಘಾಟಿಸಿದರು. ಆರೋಗ್ಯಮೇಳ ವೀಕ್ಷಿಸಿ ಶಿಶು ‌ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮ ನಡೆಸಿಕೊಟ್ಟರು. ಅಂಗನವಾಡಿಯ ಅನ್ನಪ್ರಸಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತಹಶೀಲ್ದಾರ್ ಟಿ. ಸುರೇಶ್ ಕುಮಾರ್ ಮಾತನಾಡಿ, ‘ಗ್ರಾಮ ವಾಸ್ತವ್ಯ ಕಾರಣ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಅರ್ಜಿ ಸಲ್ಲಿಸಲಾಗಿತ್ತು.ಕಂದಾಯ ಇಲಾಖೆಯ 34, ಪಿಡಿಒಗೆ ಸಂಬಂಧಿಸಿದ 13, ಕುಡಿಯುವ ನೀರು ವಿಭಾಗದ 3, ಶಿಕ್ಷಣ ಇಲಾಖೆಯ 1, ಸರ್ವೇ ಇಲಾಖೆ ಇಲಾಕೆಯ 2 ಅರ್ಜಿಗಳುಸೇರಿ ಒಟ್ಟು 82 ಅರ್ಜಿ ಸಲ್ಲಿಕೆಯಾಗಿದ್ದು, ಎಲ್ಲವನ್ನು ವಿಲೇವಾರಿ ಮಾಡಲಾಗಿದೆ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ಮಮ್ಮ ಮಲಿಯಣ್ಣ ಅಧ್ಯಕ್ಷತೆಯನ್ನು ವಹಿಸಿದ್ದರು.

ತಾಲ್ಲೂಕು ಪಂಚಾಯಿತಿ ಇಒ ಕೆ.ಇ. ಜಾನಕಿರಾಮ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಂಗಿ ಸೂರಯ್ಯ, ಮುಖಂಡ ಕೆ. ಜಗಳೂರಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಧುಸೂದನ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ಬಿಇಒ ಸಿ.ಎಸ್. ವೆಂಕಟೇಶ್ ಸ್ವಾಗತಿಸಿದರು. ಪಶು ನಿರ್ದೇಶಕ ಡಾ. ರಂಗನಾಥ್ ನಿರೂಪಿಸಿದರು.

ಸರ್ಕಾರಿ ಪ್ರೌಢಶಾಲೆ ಆರಂಭಿಸಬೇಕು. ಬಸ್ ಸೌಲಭ್ಯ, ತಾಲ್ಲೂಕಿನ ಕೆರೆಗಳಿಗೆ ನೀರುಣಿಸುವ ಕಾರ್ಯಕ್ಕೆ ಚುರುಕು ನೀಡಬೇಕು. ವಿಎಸ್ಎಸ್ಎನ್ ಬ್ಯಾಂಕ್ ಆರಂಭಿಸಬೇಕು. ತಾಲ್ಲೂಕಿನಲ್ಲಿ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿನಿಲಯ
ಗಳನ್ನು ಹೆಚ್ಚಿಸಬೇಕು. ನಾಯಕ ಜನಾಂಗದ ಜಾತಿ ಪ್ರಮಾಣಪತ್ರ ನೀಡುವಲ್ಲಿಉಂಟಾಗಿರುವ ಗೊಂದಲ ನಿವಾರಿಸಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT