ಚಿತ್ರದುರ್ಗ: ‘ಜಗತ್ತು ಇಂದು 3ನೇ ಮಹಾಯುದ್ಧದ ಹಾದಿಯಲ್ಲಿದ್ದು ದೊಡ್ಡ ರಾಷ್ಟ್ರಗಳು ಸಣ್ಣ ದೇಶಗಳ ಮೇಲೆ ಮುಗಿ ಬೀಳುತ್ತಿವೆ. ಸ್ವಾತಂತ್ರ್ಯ, ಸಮಾನತೆಯನ್ನು ಬೋಧಿಸುವ ಬಸವ ಭಾರತ ನಿರ್ಮಾಣಗೊಳ್ಳುವ ಅನಿವಾರ್ಯ ಸ್ಥಿತಿ ನಮ್ಮ ದೇಶದಲ್ಲಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಟಿಬೆಟನ್ ಧರ್ಮಗುರು ದಲೈಲಾಮಾ ಅವರ 90ನೇ ಜನ್ಮದಿನದ ಅಂಗವಾಗಿ ಮಾದಾರ ಚನ್ನಯ್ಯ ಗುರುಪೀಠ, ಸಂತೋಷ್ ಲಾಡ್ ಫೌಂಡೇಷನ್, ಇಂಡೊ–ಟಿಬೆಟ್ ಸ್ನೇಹ ಸೊಸೈಟಿ ವತಿಯಿಂದ ನಗರದ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ನಡೆದ ‘ಬಸವ ನಾಡಿನಲ್ಲಿ ಬುದ್ಧ ಸ್ಮರಣೆ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಸವಣ್ಣನವರು 12ನೇ ಶತಮಾನದಲ್ಲಿ ದಾಸೋಹ, ಕಾಯಕ ತತ್ವಗಳ ಆಧಾರದ ಮೇಲೆ ಬಸವಧರ್ಮ ಸ್ಥಾಪಿಸಿದರು. ಅಸ್ಪೃಶ್ಯ ಆಚರಣೆ ಹೆಚ್ಚಾಗಿದ್ದ ಕಾಲದಲ್ಲಿ ಕಾಯಕ ವರ್ಗಗಳನ್ನು ಒಂದುಗೂಡಿಸಿದರು. ಇದು ಮೇಲ್ವರ್ಗದ ಜನರಿಗೆ ಸರಿ ಕಾಣಲಿಲ್ಲ. ಈ ಕಾರಣಕ್ಕಾಗಿಯೇ ಕಲ್ಯಾಣ ಕ್ರಾಂತಿ ನಡೆಯಿತು. ಇಂದಿಗೂ ಬಸವಣ್ಣನವರ ಆಶಯಕ್ಕೆ ವಿರುದ್ಧವಾದ ಆಚರಣೆಗಳು ಚಾಲ್ತಿಯಲ್ಲಿವೆ’ ಎಂದರು.

‘ಅನುಭವ ಮಂಟಪ ಇಂದು ಇದ್ದಿದ್ದರೆ ಇಡೀ ದೇಶವೇ ಬಸವ ಧರ್ಮವಾಗುತ್ತಿತ್ತು. ಸಂವಿಧಾನದ ತತ್ವಗಳು, ಬಸವಣ್ಣನವರ ಆಶಯಗಳು ಒಂದೇ ಆಗಿದ್ದು ಬಸವ ತತ್ವದ ಮೇಲೆ ದೇಶ ಮುನ್ನಡೆಯಬೇಕು. ಸ್ವಾತಂತ್ರ್ಯ, ಸಮಾನತೆಯ ತತ್ವ ಬೋಧಿಸುವ ಬಸವ ಧರ್ಮ ಇಂದಿಗೂ ನಿರ್ಮಾಣಗೊಳ್ಳಬೇಕಾಗಿದೆ’ ಎಂದು ಹೇಳಿದರು.

‘ಭಾರತ ಐತಿಹಾಸಿಕವಾಗಿ ಬೌದ್ಧ ಧರ್ಮ, ಕರ್ನಾಟಕ ಐತಿಹಾಸಿಕ ಬಸವ ತತ್ವದ ತವರಾಗಿದೆ. ಬುದ್ಧ ಹಾಗೂ ಬಸವಣ್ಣನವರ ಕೊಡುಗೆ ಬಹುದೊಡ್ಡದಿದೆ. ಭಿನ್ನ ದಾರಿಯಲ್ಲಿ ನಡೆದು ಬಂದ ಈ ಮಹನೀಯರು ತಮ್ಮ ಕಾಲಘಟ್ಟದಲ್ಲಿ ಶೋಷಿತರ, ದೀನ–ದಲಿತರ, ನೊಂದವರ ಪರವಾಗಿ ಧ್ವನಿ ಎತ್ತಿದ್ದರು’ ಎಂದರು.

‘ಟಿಬೆಟ್ ನಮ್ಮ ದೇಶದೊಂದಿಗೆ 1950ರಲ್ಲಿ 3,500 ಕಿ.ಮೀ ಗಡಿ ಹೊಂದಿತ್ತು. ನಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿತ್ತು. ಆದರೆ ಚೀನಾದ ನೀತಿಯಿಂದಾಗಿ ಟಿಬೆಟನ್ನರು ನಿರಾಶ್ರಿತರಾಗಬೇಕಾಯಿತು. ಅಂದಿನ ಪ್ರಧಾನಿಯಾಗಿದ್ದ ನೆಹರೂ ಭಾರತದಲ್ಲಿ, ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರು ಕರ್ನಾಟಕದಲ್ಲಿ ಟಿಬೆಟನ್ನರಿಗೆ ಆಶ್ರಯ ಕಲ್ಪಿಸಿದರು. ಇಡೀ ದೇಶದಲ್ಲಿ ನಮ್ಮ ರಾಜ್ಯದಲ್ಲೇ ಅವರ ಸಂಖ್ಯೆ ಹೆಚ್ಚಾಗಿದೆ’ ಎಂದು ತಿಳಿಸಿದರು.

‘ಬಸವಣ್ಣ ಎಲ್ಲ ವರ್ಗದವರನ್ನು ಕೂಡಿಸಿ, ಕಾಯಕ ಮತ್ತು ದಾಸೋಹ ಸಂಸ್ಕೃತಿ ಬೆಳೆಸಿದರು. ಅಸ್ಪಶ್ಯತೆ ವಿರುದ್ಧ ಹೋರಾಡಿದರು. ಬಸವ ಧರ್ಮ ಜಾತ್ಯತೀತ ಧರ್ಮ. ಬಸವಾದಿ ಶರಣರ ಚಿಂತನೆ, ಆಶಯ ಈಡೇರಿಸುವ ನಿಟ್ಟಿನಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ. ಹೀಗಾಗಿ ಹರಿದು ಹಂಚಿ ಹೋಗಿದೆ. ಒಗ್ಗೂಡಿಸುವ ಕೆಲಸ ಆಗಬೇಕಿದೆ’ ಎಂದು ಆಶಯ ವ್ಯಕ್ತಪಡಿಸಿದರು.

ಮುಖಂಡ ಮಾರಸಂದ್ರ ಮುನಿಯಪ್ಪ ಮಾತನಾಡಿ ‘ಬುದ್ಧ ನೊಂದವರಿಗಾಗಿ ರಾಜ ಮನೆತನವನ್ನೇ ತ್ಯಜಿಸಿದರು. ಮಾನವತಾ ಧರ್ಮ ಪ್ರತಿಪಾದಿಸಿದರು. ಬಸವಣ್ಣ ಸ್ಥಾಪಿಸಿದ್ದು ಜಾತಿಯಲ್ಲ, ಅದೊಂದು ಪವಿತ್ರವಾದ ಧರ್ಮ. ಇಬ್ಬರೂ ಮಹನೀಯರು ವಿಶ್ವ ಸಂತರು. ಅಂಬೇಡ್ಕರ್ ಅವರು ಮತದಾನದ ಹಕ್ಕು ನೀಡಿದ್ದರಿಂದಾಗಿ ಶೋಷಿತ, ದಲಿತ, ಹಿಂದುಳಿದವರು ಜನಪ್ರತಿನಿಧಿಯಾಗಲು ಸಹಕಾರಿಯಾಗಿದೆ’ ಎಂದರು.

ಸಮಾರಂಭದಲ್ಲಿ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ, ಶಿವಲಿಂಗಾನಂದ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಪ್ರಸನ್ನಾನಂದಪುರಿ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ರಾಜ್ಯಸಭಾ ಮಾಜಿ ಸದಸ್ಯ ಎಚ್. ಹನುಮಂತಪ್ಪ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ ಹಾಜರಿದ್ದರು.

‘ಶಾಂತಿ ಬೋಧಿಸುವ ಸರ್ವಧರ್ಮ’

‘ಶಾಂತಿ ಸತ್ಯ ಅಹಿಂಸೆಯನ್ನು ಬೋಧಿಸುವ ಬೌದ್ಧ ಧರ್ಮದ ಬಗ್ಗೆ ನಾವು ಪ್ರೌಢಶಾಲಾ ಹಂತದಲ್ಲಿಯೇ ಓದಿದ್ದೇವೆ. ಜೈನಧರ್ಮ ಕೂಡ ನಾಡಿನಲ್ಲಿ ಒಂದು ಪುರಾತನವಾದ ಧರ್ಮವಾಗಿದೆ. ಎಲ್ಲಾ ಧರ್ಮಗಳು ಶಾಂತಿಯನ್ನೇ ಬೋಧಿಸುತ್ತವೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು. ‘ಅಶೋಕ ಚಕ್ರವರ್ತಿ ಯುದ್ಧ ಮಾಡಿದ ನಂತರ ಪಶ್ಚಾತ್ತಾಪ ಪಟ್ಟ. ಆತ ವಿಶ್ವಪರ್ಯಟನೆ ಮಾಡಿ ಬೌದ್ಧ ಧರ್ಮವನ್ನು ಪ್ರಚಾರ ಮಾಡಿದ. ನಮ್ಮ ಮಾನವ ಬದುಕನ್ನು ಸುಧಾರಿಸಿಕೊಳ್ಳಬೇಕಾದರೆ ಗೌತಮ ಬುದ್ಧರು 8 ದಾರಿಗಳನ್ನು ನೀಡಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನ ತತ್ವಾದರ್ಶ ಸಮಾಜದಕ್ಕೆ ಆದರ್ಶವಾಗಿವೆ. ಬುದ್ಧನ ಅಷ್ಠಾಂಗ ಮಾರ್ಗಗಳು ಸಮಾಜಕ್ಕೆ ಶಾಂತಿಯ ಮಂತ್ರವನ್ನು ಹೇಳಿಕೊಟ್ಟಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.