ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ವಿ.ವಿ.ಸಾಗರಕ್ಕೆ ನಾಳೆಯಿಂದ ಭದ್ರಾ ನೀರು

Last Updated 2 ಸೆಪ್ಟೆಂಬರ್ 2020, 15:32 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ವಿ.ವಿ.ಸಾಗರಕ್ಕೆ ಭದ್ರಾ ಜಲಾಶಯದಿಂದ ನೀರು ಹರಿಸುವ ಪ್ರಕ್ರಿಯೆ ಸೆ.4ರಿಂದ ಆರಂಭಗೊಳ್ಳಲಿದೆ. ಅಜ್ಜಂಪುರ ತಾಲ್ಲೂಕಿನ ಹೆಬ್ಬರೂ ಗ್ರಾಮದ ಹಳ್ಳದಿಂದ ವೇದಾವತಿ ನದಿಗೆ ನೀರು ಹರಿಸಲಾಗುತ್ತದೆ.

ಸೆ.2ರಂದು ಬುಧವಾರ ವಿ.ವಿ.ಸಾಗರಕ್ಕೆ ನೀರು ಹರಿಸುವುದಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚಾಲನೆ ನೀಡಬೇಕಿತ್ತು. ಕಾರಣಾಂತರದಿಂದ ಈ ಕಾರ್ಯಕ್ರಮ ರದ್ದಾಯಿತು. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಆ.27ರಂದು ನೀರು ಹರಿಸುವ ಕಾರ್ಯಕ್ರಮವೂ ರದ್ದಾಗಿತ್ತು.

ವಿ.ವಿ.ಸಾಗರಕ್ಕೆ ಅಂದಾಜು ಎರಡು ಟಿಎಂಸಿ ಅಡಿ ನೀರು ಹರಿಸಲಾಗುತ್ತಿದೆ. ಅಜ್ಜಂಪುರ ತಾಲ್ಲೂಕಿನ ಬೆಟ್ಟದತಾವರೆ ಸಮೀಪದ ಪಂಪ್‌ಹೌಸ್‌ನಿಂದ ಭದ್ರಾ ಮೇಲ್ದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗುತ್ತದೆ. ಹೆಬ್ಬೂರು ಗ್ರಾಮದ ಹಳ್ಳದ ಮೂಲಕ ಈ ನೀರು ವೇದಾವತಿ ನದಿ ಸೇರುತ್ತದೆ. ಅಲ್ಲಿಂದ ಜಲಾಶಯ ತಲುಪಲಿದೆ ಎಂದು ಎಂಬುದನ್ನು ವಿಶ್ವೇಶ್ವರಯ್ಯ ಜಲ ನಿಗಮದ ಪ್ರಕಟಣೆ ತಿಳಿಸಿದೆ.

ವೇದಾವತಿ ನದಿ ಪಾತ್ರದ ಹಳ್ಳಿಗಳಾದ ಬೇಗೂರು, ಕಲ್ಕೆರೆ, ಚೌಳ ಹಿರಿಯೂರು, ಕುಕ್ಕೆಸಮುದ್ರ, ಬಲ್ಲಾಳ ಸಮುದ್ರ, ಮೆಟ್ಟಿನಹೊಳೆ, ಕೆಲ್ಲೋಡು, ಲಿಂಗದಹಳ್ಳಿ, ಕಾರೆಹಳ್ಳಿ, ಹತ್ತಿಮೊಗ್ಗೆ, ಬೇವಿನಹಳ್ಳಿ ಮೂಲಕ ಸಾಗುವ ನೀರು ವಿ.ವಿ.ಸಾಗರ ತಲುಪಲಿದೆ. ಹೀಗಾಗಿ, ಕಾಲುವೆ ಮತ್ತು ನದಿಪಾತ್ರದ ಜನರು ಎಚ್ಚರಿಕೆ ಇರುವಂತೆ ನಿಗಮದ ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT