ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಭಗತ್‌ ಸಿಂಗ್‌ ವಿಚಾರಧಾರೆ ಯುವಜನತೆಗೆ ಆದರ್ಶ’

Published : 28 ಸೆಪ್ಟೆಂಬರ್ 2024, 14:43 IST
Last Updated : 28 ಸೆಪ್ಟೆಂಬರ್ 2024, 14:43 IST
ಫಾಲೋ ಮಾಡಿ
Comments

ಚಿತ್ರದುರ್ಗ: ‘ಕ್ರಾಂತಿಕಾರಿ ಹೋರಾಟಗಾರ ಭಗತ್‌ ಸಿಂಗ್‌ ಯುವಜನತೆಗೆ ಆದರ್ಶವಾಗಿದ್ದಾರೆ. ಅವರ ವಿಚಾರಧಾರೆಗಳು ಇಂದಿಗೂ ನಮ್ಮ ಸಮಾಜವನ್ನು ಮುನ್ನಡೆಸುವಲ್ಲಿ ಪ್ರಮುಖಪಾತ್ರ ವಹಿಸುತ್ತವೆ’ ಎಂದು ಎಐಯುಟಿಯುಸಿ ಕಾರ್ಮಿಕ ಸಂಘಟನೆ ಮುಖಂಡ ರವಿಕುಮಾರ್‌ ತಿಳಿಸಿದರು. 

ನಗರದ ಒನಕೆ ಓಬವ್ವ ಕ್ರೀಡಾಗಂಣದಲ್ಲಿ ಶನಿವಾರ ಆಯೋಜಿಸಿದ್ದ ಭಗತ್‌ ಸಿಂಗ್‌ ಅವರ 117ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿ, ‘ದಶಕಗಳೇ  ಕಳೆದರೂ ಬಡವ, ಶ್ರೀಮಂತರ ನಡುವೆ ಅಂತರ ಕಡಿಮೆಯಾಗಿಲ್ಲ. ರೈತ, ಕಾರ್ಮಿಕರ ಬದುಕು ಅತಂತ್ರವಾಗಿದೆ. ಉದ್ಯೋಗ, ಆರೋಗ್ಯ ವ್ಯವಸ್ಥೆ ಮತ್ತು ಶಿಕ್ಷಣದಲ್ಲಿ ಗಂಭೀರ ಕೊರತೆ ಎದುರಿಸುತ್ತಿದ್ದೇವೆ’ ಎಂದರು.

‘ಜಾತಿ, ಧರ್ಮಗಳ ಗಡಿಯನ್ನು ಮೀರಿ ಎಲ್ಲರೂ ಭಾರತೀಯರೆಂಬ ಭಾವನೆಯಿಂದ ನೆಮ್ಮದಿಯಾಗಿ ಬದುಕಬೇಕು. ಶಿಕ್ಷಣ ವ್ಯಾಪಾರೀಕರಣ, ನಿರುದ್ಯೋಗ, ಜಾತಿ ಹಾಗೂ ಕೋಮುವಾದದ ವಿರುದ್ಧ ಧ್ವನಿ ಎತ್ತಲು ಭಗತ್‌ ಸಿಂಗ್‌ ವಿಚಾರಗಳು ನಮಗೆ ಸ್ಫೂರ್ತಿಯಾಗಿವೆ’ ಎಂದು ಎಐಡಿಎಸ್‌ಒ ಜಿಲ್ಲಾ ಮುಖಂಡ ಕೆ.ಈರಣ್ಣ ತಿಳಿಸಿದರು. 

ಎಐಡಿಎಸ್‌ಒ ಸದಸ್ಯರಾದ ಹೇಮಂತ್‌, ಪವನ್‌, ನಿಶಾನ್‌, ಎಐಡಿವೈಒ ನಿಂಗರಾಜ್‌, ಎಐಎಂಎಸ್‌ಎಸ್‌ ಮಹಿಳಾ ಸಂಘಟನೆಯ ಸುಜಾತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT