ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಉತ್ಸವಕ್ಕೆ ಹುರುಪು ತುಂಬಿದ ಬೈಕ್‌ ರ್‍ಯಾಲಿ

ಹುಮ್ಮಸಿನಿಂದ ಪಾಲ್ಗೊಂಡ ನೂರಾರು ದ್ವಿಚಕ್ರ ವಾಹನ ಸವಾರರು
Last Updated 10 ಅಕ್ಟೋಬರ್ 2021, 15:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ಬೈಕ್‌ ರ್‍ಯಾಲಿ ನಡೆಯಿತು. ದ್ವಿಚಕ್ರ ವಾಹನದಲ್ಲಿ ಸಂಚರಿಸಿದ ಯುವಕರು ಉತ್ಸವಕ್ಕೆ ಹುರುಪು ತುಂಬಿದರು.

ಮುರುಘಾಮಠ, ಎಸ್‌ಜೆಎಂ ವಿದ್ಯಾಪೀಠದಿಂದ ಹಮ್ಮಿಕೊಂಡಿದ್ದ ಬೈಕ್‌ ರ‍್ಯಾಲಿಗೆ ಶಿವಮೂರ್ತಿ ಮರುಘಾ ಶರಣರು ಚಾಲನೆ ನೀಡಿದರು. ನೂರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದವು. ಇದೇ ವೇಳೆ ಅನೇಕ ಸವಾರರು ‘ಸ್ವರ್ಗ ನಮ್ಮ ದುರ್ಗ’ ಹೆಸರಿನ ತಿಳಿ ಹಳದಿ ಬಣ್ಣದ ಟೀ ಶರ್ಟ್‌ ಧರಿಸಿದ್ದರು.

ಮುರುಘಾಮಠದ ಮುಂಭಾಗ ಆರಂಭವಾದ ಬೈಕ್ ರ‍್ಯಾಲಿಯೂ ಮಾಳಪ್ಪನಹಟ್ಟಿ, ಬಿವಿಕೆಎಸ್ ಲೇಔಟ್, ಕನಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬುರುಜನಹಟ್ಟಿ ವೃತ್ತ, ಕೋಟೆ ಆಂಜನೇಯಸ್ವಾಮಿ ದೇಗುಲ, ಉಚ್ಚಂಗಿ ಯಲ್ಲಮ್ಮ ದೇಗುಲ, ರಂಗಯ್ಯನ ಬಾಗಿಲು ಮಾರ್ಗದಲ್ಲಿ ಸಂಚರಿಸಿತು.

ನಂತರ ಜೋಗಿಮಟ್ಟಿ ರಸ್ತೆಯ ಐದನೇ ತಿರುವು, ಜಿಲ್ಲಾ ಕ್ರೀಡಾಂಗಣ ರಸ್ತೆ, ಕೆಳಗೋಟೆ, ಚನ್ನಕೇಶವಸ್ವಾಮಿ ದೇಗುಲ, ಜಿಲ್ಲಾ ನ್ಯಾಯಾಲಯ ರಸ್ತೆ, ಜಿಲ್ಲಾಧಿಕಾರಿ ವೃತ್ತ, ಮದಕರಿ ವೃತ್ತ, ಗಾಂಧಿ ವೃತ್ತ, ಪ್ರಧಾನ ಅಂಚೆ ಕಚೇರಿ ರಸ್ತೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ದಾವಣಗೆರೆ ರಸ್ತೆ ಮಾರ್ಗವಾಗಿ ಪುನಃ ಮುರುಘಾಮಠ ತಲುಪಿತು.

ಉತ್ಸವ ಸಮಿತಿ ಗೌರವಾಧ್ಯಕ್ಷ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಅಥಣಿ ಮಠದ ಶಿವಬಸವ ಸ್ವಾಮೀಜಿ, ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ನವೀನ್, ಶಿವಸೇನೆ ಅಧ್ಯಕ್ಷ ಮರುಳಾರಾಧ್ಯ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT