ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಧನೆಯಿಂದ ಸಾಮಾನ್ಯರೂ ಅಸಮಾನ್ಯರಾಗಿದ್ದಾರೆ: ಬ್ರಹ್ಮ ನಿಷ್ಠಾನಂದ ಸ್ವಾಮೀಜಿ

Published 30 ಜೂನ್ 2024, 13:35 IST
Last Updated 30 ಜೂನ್ 2024, 13:35 IST
ಅಕ್ಷರ ಗಾತ್ರ

ಸಿರಿಗೆರೆ: ‘ಸಾಧನೆಯ ದಾರಿಯಲ್ಲಿ ಸಾಗಿದ ಸಾಮಾನ್ಯರೂ ಅಸಮಾನ್ಯರಾಗಿದ್ದಾರೆ. ಶ್ರದ್ಧೆಯಿಂದ ಆ ದಾರಿಯಲ್ಲಿ ಸಾಗಿದರೆ ನಿಮಗೂ ಯಶಸ್ಸು ಲಭ್ಯವಾಗುತ್ತದೆ’ ಎಂದು ಚಿತ್ರದುರ್ಗದ ಶಾರದಾ ರಾಮಕೃಷ್ಣ ಆಶ್ರಮದ ಬ್ರಹ್ಮನಿಷ್ಠಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಎಂ. ಬಸವಯ್ಯ ವಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

‘ವಿದ್ಯಾರ್ಥಿಗಳು ಶಿಕ್ಷಣದ ಧ್ಯಾನ ಮಾಡಬೇಕು. ಆಧ್ಯಾತ್ಮಿಕ ಧ್ಯಾನದ ಸಂದರ್ಭದಲ್ಲಿ ಕಣ್ಣು ಮುಚ್ಚುತ್ತೇವೆ. ಶಿಕ್ಷಣದ ವಿಚಾರಕ್ಕೆ ಬಂದಾಗ ನಮ್ಮ ಕಣ್ಣುಗಳು ತೆರೆದಿರಬೇಕು. ವಿದ್ಯಾರ್ಥಿಗಳು ಸುಸಂಸ್ಕೃತರಾಗಬೇಕು. ತಂದೆ-ತಾಯಿ, ಅನ್ನ ಕೊಡುವ ರೈತ, ದೇಶ ಕಾಯುವ ಯೋಧರ ಬಗ್ಗೆ ಗೌರವ ಭಾವನೆ ತಾಳಬೇಕು. ಎಲ್ಲರೂ ಮೊಬೈಲ್‌ ಫೋನ್‌ಗಳಿಂದ ಆದಷ್ಟೂ ದೂರ ಇರಬೇಕು’ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.

‘ಅಸಾಧ್ಯ ಎಂಬ ಪದವೇ ವಿದ್ಯಾರ್ಥಿಗಳ ಬಳಿ ಸುಳಿದಾಡಬಾರದು. ನಾನು ಸಾಧಿಸಬಲ್ಲೆ ಎಂಬ ಅಪರಿಮಿತ ವಿಶ್ವಾಸ ಬೆಳೆಯಬೇಕು’ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಡಿ.ಎಂ. ನಾಗರಾಜ್‌ ಹೇಳಿದರು. 

ಬಿಎಲ್‌ಆರ್‌ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶಿವನಗೌಡ ಸುರಕೋಡ, ನಿವೃತ್ತ ಪ್ರಾಚಾರ್ಯರಾದ ಬಿ.ಎಸ್.‌ ಕಲ್ಪನಾ, ಕಾಲೇಜಿನ ಪ್ರಾಚಾರ್ಯ ಪ್ರವೀಣ್‌ ಕುಮಾರ್‌ ಮಾತನಾಡಿದರು. 

ಡಿ.ಎಂ. ನಾಗರಾಜ್‌ ಕುಟುಂಬದ ವತಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ 46 ವಿದ್ಯಾರ್ಥಿಗಳಿಗೆ ಪದಕ, ಸ್ಮರಣಿಕೆ, ನಗದು ಬಹುಮಾನ ನೀಡಿ ಸತ್ಕರಿಸಲಾಯಿತು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಕನ್ನಡ-ಇಂಗ್ಲಿಷ್‌ ಶಬ್ದಕೋಶವನ್ನು ಉಡುಗೊರೆ ನೀಡಲಾಯಿತು. ಕಾಲೇಜಿನ ಕನ್ನಡ ಉಪನ್ಯಾಸಕಿ ರಮಾ ಅವರನ್ನು ಗೌರವಿಸಲಾಯಿತು.

ಅಧ್ಯಾಪಕ ಕಾರ್ಯದರ್ಶಿ ಬಿ. ಪ್ರಕಾಶ್‌, ಉಪನ್ಯಾಸಕ ರವಿ, ರಂಜಿತಾ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT