ಗುರುವಾರ , ಅಕ್ಟೋಬರ್ 1, 2020
27 °C

ಹಿರಿಯೂರು | ಚಲಿಸುತ್ತಿದ್ದ ಬಸ್ ಬೆಂಕಿಗೆ ಆಹುತಿ, ಒಂದೇ ಕುಟುಂಬದ ಐವರು ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Bus accident

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಕೆ.ಆರ್‌.ಹಳ್ಳಿ ಗೇಟ್‌ ಬಳಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್‌ಗೆ ಬುಧವಾರ ನಸುಕಿನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದು ವಿಜಯಪುರದ ಒಂದೇ ಕುಟುಂಬದ ಐವರು ದಹನವಾಗಿದ್ದಾರೆ.

ಅಲ್ಲಿನ ಗಣೇಶ ನಗರದ ನಿವಾಸಿ ಶೀಲಾ ರವಿ (33), ಪುತ್ರಿ ಸ್ಪರ್ಶ (8), ಪುತ್ರ ಸಮೃದ್ಧ (5), ಸಹೋದರಿ ಕವಿತಾ ವಿನಾಯಕ (29), ಇವರ ಪುತ್ರಿ ನಿಶ್ಚಿತಾ (3) ಮೃತಪಟ್ಟವರು.

ಬೆಂಗಳೂರಿನ ರಾಜಾಜಿನಗರದ ಮನ್ಸೂರ್‌ ಪಟೇಲ್‌, ವಿಜಯಪುರ ಇಎಸ್‌ಐ ಆಸ್ಪತ್ರೆ ವೈದ್ಯ ಡಾ.ಪಾಂಡುರಂಗ ಚೌವಾಣ್‌, ಬಸವರಾಜ್ ಹಾಗೂ ಪ್ರಶಾಂತ್ ಗಾಯಗೊಂಡಿದ್ದು, ಹಿರಿಯೂರು ಮತ್ತು ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು