ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗದಲ್ಲಿ ಬಿಡುವು ನೀಡಿದ ಮಳೆ: ಭಾರತ್ ಜೋಡೊ ಪಾದಯಾತ್ರೆ ಆರಂಭ

Last Updated 11 ಅಕ್ಟೋಬರ್ 2022, 3:01 IST
ಅಕ್ಷರ ಗಾತ್ರ

ಹರ್ತಿಕೋಟೆ (ಚಿತ್ರದುರ್ಗ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯ 12ನೇ ದಿನದ ಪಾದಯಾತ್ರೆ ಮಂಗಳವಾರ ಪ್ರಾರಂಭವಾಯಿತು. ಮಳೆ ಬಿಡುವು ನೀಡಿದ್ದು, ನಿಗದಿಗಿಂತ ಒಂದು ಗಂಟೆ‌ ವಿಳಂಬವಾಗಿ ಯಾತ್ರೆ ಶುರುವಾಯಿತು.

ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದಿಂದ ಆರಂಭವಾದ ಪಾದಯಾತ್ರೆ ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆವರೆಗೆ ಸಾಗಲಿದೆ. ಬೆಳಿಗ್ಗೆ ‌11 ಗಂಟೆಯವರೆಗೆ ಹೆಜ್ಜೆ ಹಾಕುವ ಯಾತ್ರಾರ್ಥಿಗಳು ಬಳಿಕ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ 4ಕ್ಕೆ ಪುನರಾರಂಭವಾಗುವ ಯಾತ್ರೆ ರಾತ್ರಿ ಚಳ್ಳಕೆರೆ ತಲುಪಲಿದೆ.

ಹಿರಿಯೂರು ನಗರದಿಂದ ಬಾಲೇನಹಳ್ಳಿವರೆಗೆ ಸೋಮವಾರ ನಡೆದಿದ್ದ ಪಾದಯಾತ್ರೆ ರಾತ್ರಿ ಹರ್ತಿಕೋಟೆ ಗ್ರಾಮದಲ್ಲಿ ವಾಸ್ತವ್ಯ ಹೂಡಿತ್ತು. ಪಾದಯಾತ್ರೆ ಮುಗಿದ ಬಳಿಕ ಆರಂಭವಾದ ಮಳೆ ರಾತ್ರಿ ಇಡೀ ಸುರಿದಿತ್ತು. ನಸುಕಿನ 6 ಗಂಟೆಗೆ ಮಳೆ‌ ಬಿಡುವು ನೀಡಿದ್ದು, ಪಾದಯಾತ್ರೆ ಆರಂಭವಾಯಿತು.

ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ '150-ಎ'ನಲ್ಲಿ ಚಳ್ಳಕೆರೆ ಮತ್ತು ಹಿರಿಯೂರು ನಡುವೆ ಪಾದಯಾತ್ರೆ ಸಾಗುತ್ತಿದೆ. ಅಪಾರ ಪ್ರಮಾಣದ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಜೊತೆಗೆ ಹೆಜ್ಜೆ ಹಾಕುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT