ಸೋಮವಾರ, ಏಪ್ರಿಲ್ 19, 2021
30 °C

ಚಿತ್ರದುರ್ಗ: ದಕ್ಷಿಣೆ ಸ್ವೀಕಾರ ವಿಚಾರದಲ್ಲಿ ಗಲಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ತೋಪಿನ ಗೊಲ್ಲಹಳ್ಳಿಯಲ್ಲಿ ದೇವರ ಪ್ರಸಾದ ಮತ್ತು ದಕ್ಷಿಣೆ ಸ್ವೀಕಾರ ವಿಚಾರದಲ್ಲಿ ಗಲಾಟೆ ನಡೆದಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.

ದಾಸಯ್ಯ ಶೇಖರ್ (34) ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತೋಪಿನ ಗೊಲ್ಲಹಳ್ಳಿಯ ಗೊಲ್ಲಾಳಮ್ಮ ದೇಗುಲದ ಪ್ರಸಾದ ಮತ್ತು ದಕ್ಷಿಣೆ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಪೂಜಾರಿಗಳು ಮತ್ತು ದಾಸಯ್ಯರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ದಾಸಯ್ಯರ ಮೇಲೆ ಪೂಜಾರಿಗಳು ಮಚ್ಚಿನಿಂದ ಹಲ್ಲೆ ನಡೆಸಿದರು ಎಂಬ ಆರೋಪ ಕೇಳಿಬಂದಿದೆ.

ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು