ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1933ರ ನಂತರ ಹಿರಿಯೂರಿನ ವಾಣಿವಿಲಾಸ ಸಾಗರ ಭರ್ತಿ: ಕೋಡಿಗೆ ಕ್ಷಣಗಣನೆ

Last Updated 1 ಸೆಪ್ಟೆಂಬರ್ 2022, 4:09 IST
ಅಕ್ಷರ ಗಾತ್ರ

ಹಿರಿಯೂರು (ಚಿತ್ರದುರ್ಗ): ತಾಲ್ಲೂಕಿನ ವಾಣಿವಿಲಾಸ ಜಲಾಶಯ ಭರ್ತಿಯಾಗಿದ್ದು, ಕೋಡಿ ಬೀಳುವ ಕ್ಷಣಕ್ಕೆ ಜನರು ಕಾತುರರಾಗಿ ಕಾಯುತ್ತಿದ್ದಾರೆ.

ಚಿಕ್ಕಮಗಳೂರು ಭಾಗದಲ್ಲಿ ಮಳೆ ಧಾರಾಕಾರವಾಗಿ ಸುರಿದಿದ್ದು, ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಗುರುವಾರ ಮೂರು ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 130 ಅಡಿ ಎತ್ತರದ ಜಲಾಶಯ ಭರ್ತಿಯಾಗಿದ್ದು ಮಧ್ಯಾಹ್ನದ ವೇಳೆಗೆ ಕೋಡಿ ಬೀಳುವ ಸಾಧ್ಯತೆ ಇದೆ. ಜಲಾಶಯದಲ್ಲಿ 30 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

1908 ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ನಿರ್ಮಾಣಗೊಂಡ ವಾಣಿವಿಲಾಸ ಜಲಾಶಯ 1933 ರಲ್ಲಿ ಮಾತ್ರ ಕೊಡಿ ಬಿದ್ದಿತ್ತು. 89 ವರ್ಷದ ಬಳಿಕ ಎರಡನೇ ಬಾರಿಗೆ ಕೋಡಿಯಲ್ಲಿ ನೀರು ಹರಿಯಲಿದೆ. ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಕಾಯುತ್ತಿದ್ದಾರೆ.

ಬುಧವಾರ ರಾತ್ರಿ 9.30 ರ ವೇಳೆಗೆ ನದಿಯಲ್ಲಿ ನೀರು ಹರಿಯಲು ಆರಂಭವಾಗಿದೆ. ಇದನ್ನು ಗಮನಿಸಿ ರಾತ್ರಿಯೇ ನೂರಾರು ಜನರು ಕೋಡಿ ಹತ್ತಿರಕ್ಕೆ ಧಾವಿಸಿದ್ದರು.

ಪೊಲೀಸ್ ಭದ್ರತೆ

ವಾಣಿವಿಲಾಸ ಜಲಾಶಯ ಕೋಡಿ ಬಿದ್ದಿದೆ ಎಂಬ ವದಂತಿ ಎಲ್ಲೆಡೆ ಹರಡಿದ್ದು ಸಾರ್ವಜನಿಕರು ರಾತ್ರಿಯಿಂದ ಗುಂಪುಗುಂಪಾಗಿ ಕೋಡಿ ಬೀಳುವ ಜಾಗದತ್ತ ಬರುತ್ತಿದ್ದಾರೆ. ಹೊಸದುರ್ಗ ಹಾಗೂ ಹಿರಿಯೂರು ತಾಲ್ಲೂಕಿನ ಗಡಿ ಭಾಗದ ಹಾರನಕಣಿವೆ ಸಮೀಪ ಕೋಡಿ ಹರಿಯಲಿದ್ದು, ಇಲ್ಲಿಗೆ ಸಾರ್ವಜನಿಕ ಪ್ರವೇಶ ನಿರ್ದಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT