ಚಿತ್ರದುರ್ಗ: ಗ್ರಹಣ ದಿನದಂದು ಬಹುತೇಕ ದೇವಸ್ಥಾನಗಳು ಪೂಜೆ ಸ್ಥಗಿತಗೊಳಿಸಿ ಬಾಗಿಲು ಮುಚ್ಚುವುದು ಸಾಮಾನ್ಯ. ಆದರೆ ಚಿತ್ರದುರ್ಗದ ನೀಲಕಂಠೇಶ್ವರ ದೇಗುಲ ಗ್ರಹಣ ಕಾಲದಲ್ಲೂ ಭಕ್ತರಿಗಾಗಿ ತೆರೆದಿರುತ್ತದೆ.

ಭಾನುವಾರ (ರಾತ್ರಿ 9.45 ರಿಂದ 1.27 ರವರೆಗೆ) ರಾಹುಗ್ರಸ್ತ ಚಂದ್ರಗ್ರಹಣದ ವೇಳೆ ಜಿಲ್ಲೆಬ ಬಹುಪಾಲು ದೇಗುಲಗಳು ಮಧ್ಯಾಹ್ನವೇ ಮುಚ್ಚಿದ್ದವು. ಆದರೆ, ಹೊಳಲ್ಕೆರೆ ರಸ್ತೆಯ ಐತಿಹಾಸಿಕ ನೀಲಕಂಠೇಶ್ವರ ದೇವಸ್ಥಾನದಲ್ಲಿ ನಿಗದಿಯಂತೆ ಪೂಜಾಕಾರ್ಯಗಳು ನಡೆದವು.

ನಿತ್ಯ ಮುಂಜಾನೆ 5 ರಿಂದ ಪೂಜೆ ಆರಂಭವಾಗಲಿದೆ. ಮಧ್ಯಾಹ್ನ 1ಕ್ಕೆ ಪೂಜೆ ಸಲ್ಲಿಸಿ ಬಾಗಿಲು ಮುಚ್ಚಲಾಗುತ್ತದೆ. ಪುನಃ ಸಂಜೆ 4.30ಕ್ಕೆ ಬಾಗಿಲು ತೆರೆದು 8.30ರವರೆಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಎಂತಹುದೇ ಗ್ರಹಣವಿದ್ದರೂ ವರ್ಷವಿಡೀ ನಡೆವ ಸೇವೆ.

ಗ್ರಹಣ ಎಂಬ ಕಾರಣಕ್ಕೆ ನಾನಾ ದೇವಸ್ಥಾನಗಳಲ್ಲಿ ಪೂಜಾ ಸ್ಥಳವನ್ನು ಗಂಗಾಜಲ, ತುಳಸಿ ನೀರಿನಿಂದ ಶುದ್ಧಿ ಮಾಡಲಾಗುತ್ತದೆ. ದೇವಸ್ಥಾನದಲ್ಲಿ ಹೋಮ, ಅಭಿಷೇಕ, ಮಂತ್ರ ಪಠಣೆ ಸೇರಿದಂತೆ ಇತರೆ ವಿಶೇಷ ಪೂಜೆ ನಡೆಸಲಾಗುವುದಿಲ್ಲ. ಆದರೆ ಇಲ್ಲಿ ಗ್ರಹಣ ಕಾಲದಲ್ಲೂ ಪೂಜೆ ನಡೆಯಲಿದ್ದು, ಭಕ್ತರಿಗೆ ಶಿವನ ದರ್ಶನದ ಅವಕಾಶ ನೀಡಲಾಗುತ್ತದೆ.

ಗ್ರಹಣದ ವೇಳೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಗುತ್ತದೆ. ಬೇರೆ ಕಡೆ ಗ್ರಹಣ ಮುಗಿದ ಬಳಿಕ ದೇಗುಲವನ್ನು ಸ್ವಚ್ಛಗೊಳಿಸಲಾಗುತ್ತದೆ. ನಮ್ಮಲ್ಲಿ ಆ ಸಂಪ್ರದಾಯ ಇಲ್ಲ.
ಶಾಂತಮೂರ್ತಿ, ದೇವಸ್ಥಾನದ ಪ್ರಧಾನ ಅರ್ಚಕರು

‘ಗ್ರಹಣ ಪ್ರಕೃತಿ ಸಹಜ ಪ್ರಕ್ರಿಯೆ. ಈ ಕಾರಣಕ್ಕೆ ದೇವಸ್ಥಾನದ ಬಾಗಿಲು ಮುಚ್ಚಿ ಪೂಜೆ ಸ್ಥಗಿತಗೊಳಿಸುವ ಸಂಪ್ರದಾಯ ನಮ್ಮಲ್ಲಿ ಇಲ್ಲ. ಇಲ್ಲಿ ವರ್ಷದ ಎಲ್ಲಾ ದಿನಗಳಲ್ಲೂ ಪೂಜೆ ಪುನಸ್ಕಾರಗಳು ನಡೆಯುತ್ತವೆ’ ಎನ್ನುತ್ತಾರೆ ದೇವಸ್ಥಾನದ ಪ್ರಧಾನ ಅರ್ಚಕ ಶಾಂತಮೂರ್ತಿ.

ಭವ್ಯ ಇತಿಹಾಸ ಹೊಂದಿರುವ ಈ ದೇವಸ್ಥಾನವನ್ನು ದೊರೆ ಭರಮಣ್ಣನಾಯಕನ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ.

Quote -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.