ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗದಲ್ಲಿ 4 ಸೆಂ.ಮೀ ಮಳೆ

Published 18 ಮೇ 2024, 15:57 IST
Last Updated 18 ಮೇ 2024, 15:57 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಶನಿವಾರವೂ ಮಳೆ ಮುಂದುವರಿದಿದ್ದು, ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 4 ಸೆಂ.ಮೀ ಮಳೆ ಸುರಿದಿದ್ದು, ಶುಕ್ರವಾರ ಸಂಜೆಯಿಂದ ಶನಿವಾರ ಬೆಳಿಗ್ಗೆವರೆಗೆ ದಾಖಲಾದ ಮಳೆಯಲ್ಲಿ ಇದು ಅತ್ಯಧಿಕ.

ಶನಿವಾರ ಸಂಜೆ ಹೊತ್ತಿಗೆ ಆಗಸದಲ್ಲಿ ಕಾಣಿಸಿಕೊಂಡ ಮೋಡಗಳು ಗುಡುಗು, ಮಿಂಚು ಸಹಿತ ಮಳೆ ಸುರಿಸಿದವು. ಹಿರಿಯೂರು ಸೇರಿದಂತೆ ಜಿಲ್ಲೆಯ ವರುಣ ಕೃಪೆ ತೋರಿದ್ದು, ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ.

ಹೊಸದುರ್ಗದಲ್ಲಿ 3 ಸೆಂ.ಮೀ, ಮಾಡದಕೆರೆಯಲ್ಲಿ 1 ಸೆಂ.ಮೀ, ಹೊಳಲ್ಕೆರೆಯಲ್ಲಿ 2 ಸೆಂ.ಮೀ, ಚಿಕ್ಕಜಾಜೂರಿನಲ್ಲಿ 4 ಸೆಂ.ಮೀ, ಎಚ್.ಡಿ.ಪುರದಲ್ಲಿ 3 ಸೆಂ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಇಕ್ಕನೂರಿನಲ್ಲಿ 2 ಸೆಂ.ಮೀ ಮಳೆ ಸುರಿದಿದೆ. ಜಿಲ್ಲೆಯ ಹಲವೆಡೆ 8 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡಿದೆ.

‘ಬೆಸ್ಕಾಂ’ ಕಚೇರಿ ಸ್ಥಳಾಂತರ:

ನಗರದ ವಿ.ಪಿ.ಬಡಾವಣೆಯಲ್ಲಿ ‘ಬೆಸ್ಕಾಂ’ ಗ್ರಾಮಾಂತರ ವಿಭಾಗದ ಕಚೇರಿ ಮಳೆಯಿಂದ ಹಾನಿಗೆ ಒಳಗಾಗಿದೆ. ಕಟ್ಟಡ ತೀರಾ ಹಳೆಯದಾಗಿದ್ದು, ಮಳೆನೀರು ಸೋರಿ ತೊಂದರೆ ಉಂಟಾಗಿದೆ. ಶನಿವಾರ ಬೆಳಿಗ್ಗೆ ಕಚೇರಿಗೆ ಹಾಜರಾಗಿದ್ದ ಸಿಬ್ಬಂದಿಯೊಬ್ಬರಿಗೆ ವಿದ್ಯುತ್‌ ಸ್ಪರ್ಶ ಉಂಟಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸಿಬ್ಬಂದಿಯ ತೀವ್ರ ಪ್ರತಿರೋಧಕ್ಕೆ ಮಣಿದ ಅಧಿಕಾರಿಗಳು ಕಚೇರಿಯನ್ನು ಜಿಲ್ಲಾಧಿಕಾರಿ ನಿವಾಸದ ಮುಂಭಾಗದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ಅನುಮತಿ ನೀಡಿದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT