ಹೊಸದುರ್ಗ: ಎಲ್ಲಾ ವರ್ಗಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಸಹಕಾರಿ ಸಂಘಗಳ ಕೊಡುಗೆ ಹೆಚ್ಚಿರುತ್ತದೆ ಎಂದು ಶಾಸಕ ಬಿ ಜಿ ಗೋವಿಂದಪ್ಪ ಅಭಿಪ್ರಾಯಪಟ್ಟರು.

ಬಸವೇಶ್ವರ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಪಟ್ಟಣದ ರಾಧಕೃಷ್ಣ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ 2024–25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಆರ್ಥಿಕ ವರ್ಗಗಳ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಜೀವಾಳವಾಗಿದ್ದು, ಬಸವೇಶ್ವರ ವಿವಿಧೋದ್ದೇಶ ಸಹಕಾರ ಸಂಘವು ಗಮನಾರ್ಹ ರೀತಿಯಲ್ಲಿ ಆರ್ಥಿಕ ಪ್ರಗತಿ ಸಾಧಿಸುತ್ತಿದೆ. ಈ ನಿಟ್ಟಿನಲ್ಲಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿ ಹಾಗೂ ಸದಸ್ಯರ ಸಹಕಾರ ಉತ್ತಮವಾಗಿದೆ. ಸಿ. ಪ್ರಕಾಶ್ ಹಾಗೂ ನಿರ್ದೇಶಕ ಮಂಡಳಿಯು ಬಸವೇಶ್ವರ ಸಹಕಾರ ಸಂಘವನ್ನು ಪಾರದರ್ಶಕವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿದ್ದು, ಜನರು ಯಾವುದೇ ಸಂಶಯಪಡದೇ ಈ ಸಂಘದಲ್ಲಿ ಹಣವನ್ನು ವಿನಿಯೋಗಿಸಬಹುದು ಎಂದರು.

ಬಸವೇಶ್ವರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸಿ. ಪ್ರಕಾಶ್ ಮಾತನಾಡಿ, ನಮ್ಮ ಸಂಘವು ಪ್ರಸಕ್ತ ಸಾಲಿನಲ್ಲಿ ₹ 24.82 ಲಕ್ಷ ನಿವ್ವಳ ಲಾಭಗಳಿಸಿದೆ. ಪ್ರಸ್ತುತ 1357 ಸದಸ್ಯರನ್ನು ಹೊಂದಿದ್ದು, ₹ 83.75 ಲಕ್ಷ ಷೇರು ಬಂಡವಾಳ ಹೊಂದಿದೆ. ಸಂಘದಲ್ಲಿ ಸಾಲಪಡೆದವರು ಸಕಾಲಕ್ಕೆ ಮರುಪಾವತಿ ಮಾಡುವುದರಿಂದ ಸಂಘದ ಬೆಳವಣಿಗೆ ಆಗುತ್ತದೆ ಎಂದರು.

ಸಂಘದ ಉಪಾಧ್ಯಕ್ಷ ಎನ್.ರಾಜಣ್ಣ, ನಿರ್ದೇಶಕರಾದ ಪಾರ್ವತಮ್ಮ, ಪಿ. ನಾಗರಾಜ್, ಎಚ್. ರವಿನಾಯ್ಕ, ಜಿ.ಆರ್. ಸತೀಶ್, ವಿ.ಎಂ. ಶಶಿಧರ್, ಕೆ.ಟಿ. ರಾಘವೇಂದ್ರ, ಪಿ. ದುಷ್ಯಂತ್, ಕೆ.ಟಿ. ಜಯಲಕ್ಷ್ಮೀ, ಶ್ರೀನಿವಾಸ್, ಮಧು ಪಿ, ಸ್ಮಿತಾ ಎ.ಎಂ, ಎಸ್. ರಾಘವೇಂದ್ರ, ಜಿಪಂ ಕೆಡಿಪಿ ಸದಸ್ಯೆ ದೀಪಿಕಾ ಸತೀಶ್, ಸಿಇಓ ದೀಪಾ, ಮುಖಂಡರಾದ ವೀರಭದ್ರಪ್ಪ, ಆಗ್ರೋ ಶಿವಣ್ಣ, ಕಾರೇಹಳ್ಳಿ ಬಸವರಾಜ್ ಲೋಕಣ್ಣ, ಅಜ್ಜಪ್ಪ, ಬ್ರಹ್ಮಪಾಲ್, ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.