ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಜಾ ಬೆಳೆ ಪತ್ತೆ: ಆರೋಪಿ ಬಂಧನ

Last Updated 20 ಆಗಸ್ಟ್ 2020, 13:38 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಸಮೀಪದ ಎನ್‌.ದೇವರಹಳ್ಳಿ ಗ್ರಾಮದ ಚಂದ್ರನಾಯ್ಕ ಎಂಬುವರ ಜಮೀನಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಗಾಂಜಾ ಬೆಳೆ ಪತ್ತೆ ಮಾಡಿದ್ದು, 45 ಕೆ.ಜಿ. ಹಸಿ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ.

ಗಾಂಜಾ ಬೆಳೆದಿದ್ದ ಆರೋಪಿಗಳ ಪೈಕಿ ರಾಜಾನಾಯ್ಕ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಚಂದ್ರನಾಯ್ಕ್ ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಕೆ.ವಿ.ಶ್ರೀಧರ್‌ ನೇತೃತ್ವದ ಪೊಲೀಸರ ತಂಡ ವರವು ರಸ್ತೆಯ ಜಮೀನಿನಲ್ಲಿ ಗುರುವಾರ ಕಾರ್ಯಾಚರಣೆ ನಡೆಸಿತು. ಟೊಮೆಟೊ, ಚಂಡುಹೂವು ಹಾಗೂ ಮೆಣಸಿನಕಾಯಿ ಬೆಳೆಯ ನಡುವೆ ಗಾಂಜಾ ಬೆಳೆದಿರುವುದನ್ನು ಪತ್ತೆ ಮಾಡಿತು.

ಗಾಂಜಾ ಗಿಡಗಳನ್ನು ಕಿತ್ತು ತೂಕ ಹಾಕಲಾಯಿತು. 45 ಕೆ.ಜಿ. ಹಸಿ ಗಾಂಜಾ ಇರುವುದನ್ನು ದೃಢಪಡಿಸಿತು. ತಂಡದಲ್ಲಿ ಮೊಳಕಾಲ್ಮುರು ಸಿಪಿಐ ಜಿ.ಬಿ. ಉಮೇಶ್, ಪಿಎಸ್‍ಐ ಎಸ್. ರಘುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT