ಚಳ್ಳಕೆರೆ: ಗ್ರಾಮೀಣ ಪ್ರದೇಶದಲ್ಲಿ ನೂರಾರು ಗರ್ಭಿಣಿಯರ ಹೆರಿಗೆ ಮಾಡಿಸಿದ ಶತಾಯುಷಿ ಸೂಲಗಿತ್ತಿ ತಳಕು ತಿಮ್ಮಜ್ಜಿ ಸೇವೆ ಗುರುತಿಸಿ ರಾಷ್ಟ್ರ- ರಾಜ್ಯ ಪ್ರಶಸ್ತಿ ನೀಡಬೇಕು ಎಂದು ಶ್ರೀ ಶಾರದಾಶ್ರಮದ ಭಕ್ತೆ ಜಿ.ಯಶೋಧಾ ಪ್ರಕಾಶ್ ಸರ್ಕಾರವನ್ನು ಒತ್ತಾಯಿಸಿದರು.

ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ ಚಳ್ಳಕೆರೆ ಹಳೆಟೌನ್ ಪಿರಾಮಿಡ್ ಧ್ಯಾನಾಮೃತ ಕೇಂದ್ರ ಮತ್ತು ಶ್ರೀ ಶಾರದಾಶ್ರಮ ಇವುಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸೂಲಗಿತ್ತಿ ತಿಮ್ಮಜ್ಜಿಗೆ ದಿನಸಿ ವಸ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯಾವುದೇ ಪ್ರತಿಫಲಾಪೇಕ್ಷೆ ಹೊಂದಿರದೆ ಸೇವೆಯೇ ದೇವರು ಎಂದು ನಂಬಿರುವ ಸೂಲಗಿತ್ತಿ ತಿಮ್ಮಜ್ಜಿಗೆ ಇರಲಿಕ್ಕೆ ಸೂರಿಲ್ಲದಿರುವ ಕಾರಣ ತೆಂಗಿನ ಗರಿ ಗಳದ ಜೋಪಡಿಯಲ್ಲಿ ಜೀವನ ನೂಕುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಧ್ಯಾನ ಕೇಂದ್ರದ ಸೌಮ್ಯ ಉಮೇಶ್ ಮಾತನಾಡಿ, ‘ಕಾಲುವೆಹಳ್ಳಿ ಗ್ರಾಮ ಚಳ್ಳಕೆರೆ ತಾಲ್ಲೂಕು ಕೇಂದ್ರ ಆಗಿದ್ದರೂ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಹೀಗಾಗಿ ಎರಡೂ ಕ್ಷೇತ್ರದ ಶಾಸಕರು ಸೂಲಗಿತ್ತಿ ತಳಕು ತಿಮ್ಮಜ್ಜಿಗೆ ಗ್ರಾಮ ಪಂಚಾಯಿತಿಯಿಂದ ವಸತಿಗೆ ಮನೆ ನಿರ್ಮಿಸಿ, ಅಲ್ಲದೇ ಅಜ್ಜಿ ಸಲ್ಲಿಸಿರುವ ಹೆರಿಗೆ ಸೇವೆಗೆ ಸರ್ಕಾರದಿಂದ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಕೊಡಿಸಬೇಕು’ ಎಂದು ಆಗ್ರಹಿಸಿದರು.

ಚಳ್ಳಕೆರೆ ಹೂವಿನ ಲಕ್ಷ್ಮೀದೇವಿ, ಮಹಾದೇವಿ, ಬೋರಣ್ಣ, ತಿಪ್ಪೇಸ್ವಾಮಿ, ಸಮಾಜ ಸೇವಕ ಯತೀಶ್ ಮಾತನಾಡಿದರು.

ಸೂಲಗಿತ್ತಿ ತಿಮ್ಮಜ್ಜಿಗೆ, ಆಹಾರ ಧಾನ್ಯ, ಉಡುಪು, ಹಾಸಿಗೆ, ಹೊದಿಕೆ ನೀಡಿದರು. ನಂತರ ಅಜ್ಜಿ ಮೊಮ್ಮಕ್ಕಳ ಶಿಕ್ಷಣ ಕಲಿಕೆಗೆ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸಲಾಯಿತು.

ಮಹಿಳಾ ಸಂಘದ ಪ್ರತಿನಿಧಿ ಪಾಲಕ್ಕ, ಆಟೋ ಏಕಾಂತಣ್ಣ, ಬಿ.ಎಂ.ಗೀತಾ, ಚನ್ನಕೇಶವ, ಲೋಕೇಶ್ ಪೂಜಾರಿ, ಮಂಜುಳಾ ಜಯಪಾಲಯ್ಯ, ಓಬಕ್ಕ, ಕರಿಯಣ್ಣ, ಗೌತಮಿ, ಮೌನಶ್ರೀ, ಬೋರಕ್ಕ, ಗಂಗಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.