ಧರ್ಮಪುರ: ಚಿತ್ರದುರ್ಗ ಜಿಲ್ಲೆಯ ಎರಡನೇ ಅತಿ ದೊಡ್ಡ ಕೆರೆ ಎಂದೇ ಹೆಸರಾಗಿರುವ ಪುರಾಣ ಪ್ರಸಿದ್ಧ ಧರ್ಮಪುರ ಕೆರೆ ಕಾಯಕಲ್ಪಕ್ಕಾಗಿ ಕಾಯುತ್ತಿದೆ.

ಏರಿ ಮೇಲೆ ಬೆಳೆದಿರುವ ಬಳ್ಳಾರಿ ಜಾಲಿ, ಕೆರೆಯಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಪ್ಲಾಸ್ಟಿಕ್, ಕಸ ಕಡ್ಡಿ, ಬಳ್ಳಾರಿ ಜಾಲಿಯ ಸೊಪ್ಪು, ಕೋಳಿ ಅಂಗಡಿಯ ತ್ಯಾಜ್ಯ, ಮದ್ಯದ ಅಂಗಡಿಗಳ ತ್ಯಾಜ್ಯಗಳಾದ ಪ್ಲಾಸ್ಟಿಕ್ ಪೌಚ್, ಲೋಟಗಳು ಮತ್ತು ದಡದ ಬಳಿ ಇರುವ ಸ್ಮಶಾನ ಜಾಗದಿಂದ ನೀರು ಸಂಪೂರ್ಣ ಕಲುಷಿತಗೊಂಡು ಕೆರೆಯ ಅಂದವನ್ನು ದೂರ ಮಾಡಿದೆ.

700 ಹೆಕ್ಟೇರ್ ವಿಸ್ತೀರ್ಣ, 380 ದಶಲಕ್ಷ ಕ್ಯೂಬಿಕ್ ನೀರಿನ ಸಂಗ್ರಹ ಸಾಮರ್ಥ್ಯದ, 900 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿರುವ ಈ ಕೆರೆ ಏರಿಯ ಉದ್ದ ಅಂದಾಜು 1.5 ಕಿ.ಮೀ. ಇದೆ.

ಹಿಂದೆ ಪಾಂಡವರು ವನವಾಸದಲ್ಲಿದ್ದಾಗ ಈ ಕೆರೆ ನಿರ್ಮಾಣವಾಗಿದೆ ಎಂಬ ಪ್ರತೀತಿ ಇದೆ. ಕ್ರಿ.ಶ. 8ನೇ ಶತಮಾನದಲ್ಲಿ ನೊಳಂಬವಾಡಿ 32,000 ಪ್ರಾಂತ್ಯದ ದೊರೆಗಳಾದ ನೊಳಂಬರ ಕಾಲದಲ್ಲಿ ಇದು ನಿರ್ಮಾಣವಾಗಿದೆ ಎಂದೂ ಹೇಳಲಾಗುತ್ತದೆ. ಆದರೆ, ಇದಕ್ಕೆ ಪೂರಕ ದಾಖಲೆಗಳಿಲ್ಲ. ಈ ಕೆರೆ ನೀರು ತುಂಬದೇ ಬಹಳ ವರ್ಷಗಳವರೆಗೆ ಗ್ರಹಣ ಹಿಡಿದಿತ್ತು. 1882ರಲ್ಲಿ ಕೆರೆ ಕೋಡಿ ಹರಿದಿತ್ತು. ನಂತರ 2022 ಅ. 22ರಂದು ಕೋಡಿ ಹರಿದಿತ್ತು.

ವೇದಾವತಿ ನದಿಗೆ ಹೊಸಹಳ್ಳಿ ಬಳಿ ಬ್ಯಾರೇಜ್ ನಿರ್ಮಾಣವಾಗಿದ್ದು, ಏತ ನೀರಾವರಿ ಯೋಜನೆ ಮೂಲಕ ಧರ್ಮಪುರ ಕೆರೆ ಸೇರಿ ಹೋಬಳಿಯ 8 ಕೆರೆಗಳಿಗೆ ನೀರು ಹರಿಯಲು ಪ್ರಾರಂಭವಾಗಿದೆ. 2022ರಿಂದಲೂ ಕೆರೆಯಲ್ಲಿ ನೀರು ಸಂಗ್ರಹವಿದ್ದು, ಈ ಭಾಗದ ಜನರ ಕುಡಿಯುವ ನೀರಿನ ಹಾಹಾಕಾರ ಸ್ವಲ್ಪ ಮಟ್ಟಿಗೆ ದೂರವಾಗಿದೆ.

15 ದಿನಗಳಿಂದ ವೇದಾವತಿ ನದಿಯಲ್ಲಿ ನೀರಿನ ಹರಿವು ಜಾಸ್ತಿಯಾಗಿ ಕೆರೆಗೆ ನೀರು ಬಂದಿದೆ. ಧರ್ಮಪುರ ಕೆರೆಗೆ ನಿತ್ಯ ಹೊಸಹಳ್ಳಿ ಪಂಪ್ ಹೌಸ್ನಿಂದ ನೀರು ಹರಿಯುತ್ತಿದ್ದು, ಕೆರೆ ತುಂಬುವ ಹಂತಕ್ಕೆ ತಲುಪಿದೆ. ಮುಂದಿನ 20 ದಿನಗಳವರೆಗೆ ಇದೇ ರೀತಿ ನೀರು ಹರಿದರೆ ಈ ಕೆರೆಯೂ ಕೋಡಿ ಹರಿಯಲಿದೆ.

ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿರುವುದನ್ನು ಕಣ್ತುಂಬಿಕೊಳ್ಳಲು ನಿತ್ಯ ನೂರಾರು ಜನರು ಕೆರೆಯ ಬಳಿ ಬರುತ್ತಿದ್ದಾರೆ. ಆದರೆ, ಕೆರೆ ಏರಿ ಮೇಲೆ ಬೆಳೆದಿರುವ ಬಳ್ಳಾರಿ ಜಾಲಿ ಯಾರನ್ನೂ ಕೆರೆಯ ಬಳಿ ಬರುವುದಕ್ಕೆ ಬಿಡುತ್ತಿಲ್ಲ. ಜೊತೆಗೆ ನಿತ್ಯ ಕೆರೆ ಮೇಲೆ ವಾಯುವಿಹಾರ ಮಾಡುತ್ತಿದ್ದವರಿಗೆ ಈ ಜಾಲಿಯೇ ಅಘೋಷಿತ ನಿರ್ಬಂಧ ಹೇರಿದೆ.

‘ಪ್ರೇಕ್ಷಣೀಯ ಸ್ಥಳವನ್ನಾಗಿಸಿ’

ಕೆರೆ ಏರಿ ಮೇಲೆ ಬೆಳೆದಿರುವ ಬಳ್ಳಾರಿ ಜಾಲಿಯನ್ನು ತೆರವುಗೊಳಿಸಬೇಕು. ನಿತ್ಯ ವಾಯುವಿಹಾರಕ್ಕೆ ಹೋಗುವವರಿಗೆ ಅನುಕೂಲ ಕಲ್ಪಿಸಬೇಕು. ಶ್ರವಣಕುಮಾರನ ವಿಗ್ರಹ ಪಕ್ಕದಲ್ಲಿ ಸ್ಥಳಾವಕಾಶವಿದ್ದು ಪಾರ್ಕ್ ನಿರ್ಮಿಸಲು ಸೂಕ್ತವಾಗಿದೆ. ಕೆರೆಯಲ್ಲಿ ದೋಣಿ ವಿಹಾರಕ್ಕೆ ಪ್ರೋತ್ಸಾಹಿಸಬೇಕು. ಪಂಚಲಿಂಗ ದೇವಾಲಯಗಳ ಜೀರ್ಣೋದ್ಧಾರ ಮಾಡುವ ಮೂಲಕ ಪುರಾಣ ಪ್ರಸಿದ್ಧ ಗ್ರಾಮ ಧರ್ಮಪುರವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿಸಬೇಕು ಮತ್ತು ನೀರು ಕಲುಷಿತವಾಗುತ್ತಿರುವುದನ್ನು ತಪ್ಪಿಸಲು ಜಾಗೃತಿ ಕಾರ್ಯಕ್ರಮಗಳು ಬೇಕು. ಎಸ್.ಆರ್.ತಿಪ್ಪೇಸ್ವಾಮಿ ಶ್ರವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.