ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ನಕಲಿ ಗುರುತಿನ ಚೀಟಿ ಮುದ್ರಣ: ಕಂಪ್ಯೂಟರ್ ಸೆಂಟರ್ ಮೇಲೆ ದಾಳಿ

Last Updated 11 ಡಿಸೆಂಬರ್ 2022, 6:41 IST
ಅಕ್ಷರ ಗಾತ್ರ

ಚಳ್ಳಕೆರೆ: ಮತದಾರರ ನಕಲಿ ಗುರುತಿನ ಚೀಟಿ ಮುದ್ರಿಸುತ್ತಿದ್ದ ಇಲ್ಲಿನ ಶಾಂತಿನಗರದ ಮಂಜುನಾಥ ಕಂಪ್ಯೂಟರ್ ಸೆಂಟರ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 20 ನಕಲಿ ಗುರುತಿನ ಚೀಟಿಯನ್ನು ವಶಪಡಿಸಿಕೊಂಡರು.

ನಕಲಿ ಗುರುತಿನ ಚೀಟಿಮುದ್ರಿಸುತ್ತಿದ್ದ ಜಾಲದ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ಎನ್. ರಘುಮೂರ್ತಿ ದಾಳಿನಡೆಸಿದರು.

‘ಪಟ್ಟಿಯಲ್ಲಿ ಇರುವ ಮತದಾರರಿಗೆ ಕಾರ್ಡ್ ವಿತರಿಸುವುದು ಚುನಾವಣಾ ಆಯೋಗದ ಕೆಲಸವಾಗಿದೆ. ಹೀಗಾಗಿ ಸಂಬಂಧಪಟ್ಟ ಏಜೆನ್ಸಿಗೆ ಗುರುತಿನ ಚೀಟಿ ಮುದ್ರಿಸಲು ಪರವಾನಗಿ ನೀಡುತ್ತದೆ.ಆಯೋಗಕ್ಕೆ ಕೆಟ್ಟ ಹೆಸರು ತರುವ ಸಲುವಾಗಿ ಕೆಲವು ಅನಧಿಕೃತ ಕಂಪ್ಯೂಟರ್ ಸೆಂಟರ್‌ಗಳು, ಗುರುತಿನ ಚೀಟಿ ಮುದ್ರಿಸುವುದಲ್ಲದೆ ನಕಲಿ ಸಹಿ ಸೃಷ್ಟಿಸಿ ಚೀಟಿಯನ್ನು ದುಬಾರಿ ಹಣಕ್ಕೆ ಮಾರಾಟ ಮಾಡುವ ಮೂಲಕ ಮತದಾರರನ್ನು ವಂಚಿಸುತ್ತಿರುವುದುಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿ ಆದೇಶದಂತೆ ಅಂಗಡಿಯನ್ನು ಮುಚ್ಚಿಸಿ ಮಾಲೀಕರ ವಿರುದ್ಧದ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ರಘುಮೂರ್ತಿ ಹೇಳಿದರು.

ಶಿಕ್ಷಣ ಇಲಾಖೆ ತಾಲ್ಲೂಕು ಅಧಿಕಾರಿ ಕೆ.ಎಸ್.ಸುರೇಶ್, ಚುನಾವಣಾ ಶಾಖೆ ಓಬಳೇಶ್, ಕಂದಾಯ ಅಧಿಕಾರಿ ನಿಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT