ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಅತಿಥಿಗೃಹದಲ್ಲೇ ಜೂಜು: ನಗರಸಭಾ ಸದಸ್ಯರು ಸೇರಿ 16 ಜನರ ಬಂಧನ

₹ 4.37 ಲಕ್ಷ ವಶ
Published 18 ಡಿಸೆಂಬರ್ 2023, 4:47 IST
Last Updated 18 ಡಿಸೆಂಬರ್ 2023, 4:47 IST
ಅಕ್ಷರ ಗಾತ್ರ

ಹಿರಿಯೂರು (ಚಿತ್ರದುರ್ಗ): ತಾಲ್ಲೂಕಿನ ವಾಣಿವಿಲಾಸಪುರ ಸರ್ಕಾರಿ ಅತಿಥಿಗೃಹದಲ್ಲಿ ಜೂಜು ಆಡುತ್ತಿದ್ದ ಆರೋಪದ ಮೇರೆಗೆ ಹಿರಿಯೂರು ನಗರಸಭೆಯ ಮೂವರು ಸದಸ್ಯರು ಸೇರಿ 16 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ₹ 4.3 ಲಕ್ಷ ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ ಹಿರಿಯೂರು ನಗರಸಭಾ ಸದಸ್ಯರಾದ ಜಗದೀಶ್, ಅಜ್ಜಪ್ಪ ಹಾಗೂ ಅನಿಲ್ ಕುಮಾರ್ ಮತ್ತು ಪ್ರವಾಸಿ ಮಂದಿರ ನಿರ್ವಹಣೆ ಮಾಡುತ್ತಿದ್ದ ಮೇಟಿ ನಾಸಿರ್ ಸೇರಿದ್ದಾರೆ.

ಹಿರಿಯೂರು ತಾಲ್ಲೂಕಿನ ವಿ.ವಿ.ಸಾಗರ ಸಮೀಪದ ಅತಿಥಿ ಗೃಹದಲ್ಲಿ ಭಾನುವಾರ ತಂಗಿದ್ದ ನಗರಸಭಾ ಸದಸ್ಯರು ಜೂಜಾಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿದ್ದರು. ಅತಿಥಿ ಗೃಹದ ಸಿಬ್ಬಂದಿ ಇದರಲ್ಲಿ ಷಾಮೀಲಾಗಿರುವುದು ಬೆಳಕಿಗೆ ಬಂದಿದೆ.

ಹಿರಿಯೂರಿನ ರಾಜಪ್ಪ, ಟಿ.ಮಂಜುನಾಥ್, ಕೆ.ಎಂ. ಕೊಟ್ಟಿಗೆ ಬಾಬು, ಎಚ್.ಧನರಾಜ್, ಮಾರುತಿ, ಮುದಿಯಣ್ಣ, ಕಬಡ್ಡಿ ರವಿ, ಸಾಲುಮರದ ಹಟ್ಟಿಯ ಚಿತ್ರಲಿಂಗೇಶ್, ಚಿತ್ರದುರ್ಗ ತಾಲ್ಲೂಕಿನ ಜಾನುಕೊಂಡದ ಕೆ.ಮಂಜುನಾಥ್ ಯಾದವ್, ತಾವರೆಕೆರೆ ಗ್ರಾಮದ ಟಿ.ಕೆ.ಚಿಕ್ಕಣ್ಣ, ಚೆನ್ನಯ್ಯನಹಟ್ಟಿಯ ಓಂಕಾರೇಶ್ವರ, ಜವನಗೊಂಡನಹಳ್ಳಿಯ ಮಣಿಕಂಠ ಇವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT