ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಂಧ್ರಧಲ್ಲಿ ಕಾಣಿಸಿಕೊಂಡ ಮಿಡತೆಗಳು ಹಾನಿಕಾರಕವಲ್ಲ’

Last Updated 29 ಮೇ 2020, 15:30 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಪಟ್ಟಣಕ್ಕೆ ಸಮೀಪವಿರುವ ನೆರೆಯ ಆಂಧ್ರಪ್ರದೇಶದರಾಯದುರ್ಗ ತಾಲ್ಲೂಕಿನಲ್ಲಿ ಕೆಲವೆಡೆ ಕಾಣಿಸಿಕೊಂಡಿರುವ ಮಿಡತೆಗಳು ಹಾನಿಕಾರಕವಲ್ಲ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಪಕ್ಕದ ರಾಜ್ಯದಲ್ಲಿ ಆತಂಕ ಸೃಷ್ಟಿಸಿದ್ದ ಮಿಡತೆಗಳಿಂದ ಗಡಿಭಾಗದ ರೈತರು ಭಯಗೊಂಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೃಷಿ ಇಲಾಖೆ ಅಧಿಕಾರಿಗಳು, ‘ಪ್ರತಿವರ್ಷ ಬೇಸಿಗೆಯಲ್ಲಿ ಮಿಡತೆಗಳು ಸಂತಾನೋತ್ಪತ್ತಿನಡೆಸುತ್ತವೆ. ಹಾಗಾಗಿ ಗುಂಪು, ಗುಂಪಾಗಿ ಕಾಣಿಸಿಕೊಳ್ಳುತ್ತವೆ.ಇವು ಎಕ್ಕೆ ಗಿಡಗಳನ್ನು ಮಾತ್ರ ತಿನ್ನುತ್ತವೆ. ಬೇರೆ ಹಸಿರು ಗಿಡಗಳನ್ನು ತಿನ್ನುವುದಿಲ್ಲ. ಬಯಲುಸೀಮೆಯಲ್ಲಿ ಇಂತಹ ಮಿಡತೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿರುವ ಮಿಡತೆಗಳು ಇವಲ್ಲ. ಮಿಡತೆಗಳ ಬಗ್ಗೆ ರೈತರ ಸಭೆ ನಡೆಸಿ ತಿಳಿಸಲಾಗಿದೆ ಎಂದು ಇಲಾಖೆಯ ರಾಜಣ್ಣಹೇಳಿದರು.

ಮಿಡತೆಗಳು ಎಕ್ಕೆ ಗಿಡಗಳ ಎಲೆಗಳನ್ನು ತಿನ್ನುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹಡಿದಾಡಿದ್ದವು. ಇದರಿಂದ ರೈತರು ಆತಂಕಕ್ಕೀಡಾಗಿದ್ದರು.ಶುಕ್ರವಾರ ಆಂಧ್ರದ ಕೆಲ ಮಾದ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇವು ಹಾನಿಕಾರಕವಲ್ಲ ಎಂಬ ಸ್ಪಷ್ಟನೆ ಇರುವ ಸಂಗತಿಯೂ ಹರಿದಾಡಿದೆ.

ಇಂತಹ ಸುದ್ದಿಯನ್ನು ಹರಿಬಿಡುವ ಮೊದಲು ತುಸು ಯೋಜನೆ ಮಾಡಬೇಕು. ಈಗಾಗಲೇ ಕೊರೊನಾ ಪರಿಸ್ಥಿತಿಯಿಂದ ಜನರು ಹಾಗೂ ರೈತರು ಆತಂಕಗೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಿಡತೆಗಳ ಬಗ್ಗೆ ಪೂರ್ಣ ವಿವರ ತಿಳಿಯದೇ ಸುಳ್ಳು ಸುದ್ದಿ ಹಾಗೂ ಪ್ರಚಾರ ಮಾಡುವುದು ಸರಿಯಲ್ಲ ಎಂದು ರೈತ ತಿಪ್ಪೇಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT