ಹಿಂದಿನ ವರ್ಷ ರೈತರಿಗೆ 500 ಕ್ವಿಂಟಲ್ ಲೇಪಾಕ್ಷಿ ಶೇಂಗಾ ಬಿತ್ತನೆ ಬೀಜವನ್ನು ಕೃಷಿ ಇಲಾಖೆ ವಿತರಿಸಿತ್ತು. ಇದು ಕಡಿಮೆ ರುಚಿ ಎಂಬ ಕಾರಣಕ್ಕೆ ರೈತರು ಬೆಳೆಯಲು ಆಸಕ್ತಿ ತೋರಲಿಲ್ಲ. ಈ ವರ್ಷ ಡಿ.ಎಚ್-256 ತಳಿಯ 500 ಕ್ವಿಂಟಲ್ ಶೇಂಗಾ ಬೀಜವನ್ನು ಜಿಲ್ಲೆಗೆ ವಿತರಿಸಲು ಕೃಷಿ ಇಲಾಖೆ ಚಿಂತನೆ ನಡೆಸಿದೆ.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರ ನಿರ್ದೇಶನದಂತೆ ಕೆಒಎಫ್ ಬಿತ್ತನೆ ಬೀಜದ ದರವನ್ನು ₹6500ಕ್ಕೆ ನಿಗದಿ ಮಾಡಿ ಸಬ್ಸಿಡಿ ಸೌಲಭ್ಯ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಪತ್ರ ಬರೆಯಲಾಗಿದೆ. ದರ ಪರಿಷ್ಕರಣೆ ಆಗುವ ತನಕ ಈಗ ನಿಗದಿಗೊಳಿಸಿದ ದರಕ್ಕೆ ಮಾರಾಟ ಮಾಡಲಾಗುತ್ತದೆಪಿ.ರಮೇಶ್ ಕುಮಾರ್, ಜಂಟಿ ಕೃಷಿ ನಿರ್ದೇಶಕ
ರೈತ ಸಂಪರ್ಕ ಕೇಂದ್ರಗಳ ಮೂಲಕ ಮಾರಾಟವಾಗುತ್ತಿರುವ ಬಿತ್ತನೆಯ ಶೇಂಗಾ ಗುಣಮಟ್ಟವಾಗಿಲ್ಲ. ಜೊತೆಗೆ ದುಬಾರಿ ಬೆಲೆ ನಿಗದಿ ಮಾಡಿರುವುದು ಅವೈಜ್ಞಾನಿಕ. ಸ್ಥಳೀಯವಾಗಿ ರೈತರು ಬೆಳೆದಿರುವ ಗುಣಮಟ್ಟದ ಶೇಂಗಾ ಒಂದು ಕ್ವಿಂಟಲ್‌ಗೆ ₹6500 ಕ್ಕೆ ದೊರೆಯುತ್ತಿದೆಹೊಂಬಕ್ಕ, ರೈತ ಮಹಿಳೆ, ಗೂಳ್ಯ
ಕೇವಲ ಆರೇಳು ಕಿ.ಮೀ.ದೂರದಲ್ಲಿರುವ ಆಂಧ್ರಪ್ರದೇಶದ ಗಡಿ ಗ್ರಾಮಗಳಲ್ಲಿ ಗುಣಮಟ್ಟದ ಶೇಂಗಾ ಬಿತ್ತನೆ ಬೀಜ ಕಡಿಮೆ ದರಕ್ಕೆ ಸಿಗುತ್ತಿದೆ. ಆ ಕಾರಣಕ್ಕೆ ಬಿತ್ತನೆ ಕಾರ್ಯಕ್ಕೂ ಮುನ್ನವೇ ಹೋಗಿ ಖರೀದಿಸುತ್ತೇವೆ. ನಾಲ್ಕೈದು ವರ್ಷದಿಂದ ಇದೇ ರೀತಿ ಮಾಡುತ್ತಿದ್ದೇವೆಎ.ಶಿವಮೂರ್ತಿ, ರೈತ ಬೆನಕನಹಳ್ಳಿ
ಶೇಂಗಾ ಬಿತ್ತನೆ ಬೀಜ ದರದ ವಿಚಾರದಲ್ಲಿ ಸರ್ಕಾರ ಪ್ರತಿ ಬಾರಿಯೂ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಅಧಿಕ ಬೆಲೆ ನಿಗದಿ ಮಾಡಿ ಸಬ್ಸಿಡಿ ನೀಡುತ್ತದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಕೂಡಲೇ ದರ ಇಳಿಕೆ ಮಾಡಿ ಸಬ್ಸಿಡಿ ಮುಂದುವರಿಸಬೇಕುಕೆ.ಪಿ.ಭೂತಯ್ಯ, ರಾಜ್ಯ ರೈತ ಸಂಘ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.