ಹೊಳಲ್ಕೆರೆ: ವಾಗ್ದೇವಿ ವಿದ್ಯಾಸಂಸ್ಥೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಶನಿವಾರ ಪಟ್ಟಣದಲ್ಲಿ ಬಾಲ ದಸರಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪಟ್ಟಣದ ಗಣಪತಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಮುಖ್ಯವೃತ್ತ, ಚಿತ್ರದುರ್ಗ ರಸ್ತೆ, ದಾವಣಗೆರೆ ಸರ್ಕಲ್, ಶಿವಮೊಗ್ಗ ರಸ್ತೆ ಮೂಲಕ ವಾಗ್ದೇವಿ ಶಾಲೆವರೆಗೆ ಸಾಗಿತು. ಚಂಡೆ, ಕೋಲಾಟ, ಕಂಸಾಳೆ, ಡೊಳ್ಳು, ಬಂಜಾರ ನೃತ್ಯ ಮತ್ತಿತರ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು. ವಿವಿಧ ಪ್ರಕಾರದ ಗೊಂಬೆಗಳು, ಕೀಲು ಕುದುರೆ ಹಾಗೂ ವೇಷಧಾರಿಗಳು ಜನರ ಗಮನ ಸೆಳೆದರು. ಆಪರೇಷನ್ ಸಿಂಧೂರ, ನವದುರ್ಗೆಯರು, ರಾವಣ ಸಂಹಾರ, ಅಂಬಿನೋತ್ಸವದಂತಹ ಸ್ತದ್ಧ ಚಿತ್ರಗಳು ಎಲ್ಲರನ್ನು ಆಕರ್ಷಿಸಿದವು.

ಆನೆ ಮಾದರಿಯ ಕಲಾಕೃತಿಯ ಮೇಲೆ ಅಂಬಾರಿ ಕೂರಿಸಿ ಪುಷ್ಪಾರ್ಚನೆ ಮಾಡಲಾಯಿತು. ಕುವೆಂಪು ನಾಡಗೀತೆ ರಚಿಸಿ 100 ವರ್ಷ ಪೂರ್ಣಗೊಂಡ ಸಂಭ್ರಮದ ಸಂಕೇತವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಕೆಂಪು, ಹಳದಿ ಶಾಲು ಧರಿಸಿ ನಾಡಗೀತೆ ಹಾಡಿದರು.

ಪುರಸಭೆ ಅಧ್ಯಕ್ಷ ವಿಜಯ ಸಿಂಹ ಖಾಟ್ರೋತ್, ತಹಶೀಲ್ದಾರ್ ವಿಜಯಕುಮಾರ್, ಪಿಎಸ್ ಐ ಸಚಿನ್ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಶಿವಮೂರ್ತಿ, ಪುರಸಭೆ ಸದಸ್ಯರಾದ ಬಿ.ಎಸ್.ರುದ್ರಪ್ಪ, ಮಲ್ಲಿಕಾರ್ಜುನ, ಕೆ.ಸಿ.ರಮೇಶ್, ಸೈಯದ್ ಸಜಿಲ್, ನಾಮನಿರ್ದೇಶಿತ ಸದಸ್ಯರಾದ ಬಸವರಾಜ್, ವಾಗ್ದೇವಿ ಸಂಸ್ಥೆಯ ಕಾರ್ಯದರ್ಶಿ ಸಿದ್ದಲಿಂಗಸ್ವಾಮಿ, ಆಡಳಿತಾಧಿಕಾರಿ ಶಿವರಾಂ, ಸಂಸ್ಥೆಯ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.