ವೀರೇಂದ್ರ ಹೆಗ್ಗಡೆ ಅವರನ್ನು ಮೆರವಣಿಗೆಯ ಮೂಲಕ ಕರೆತರಲಾಯಿತು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನಸ್ತೋಮ
ಒಬ್ಬ ಮಹಿಳೆಯಾಗಿ ನಿರ್ಮಲಾ ಸೀತಾರಾಮನ್ ದೇಶದ ಹಣಕಾಸು ಮಂತ್ರಿಯಾಗಿರುವುದು ಹೆಮ್ಮೆಯ ಸಂಗತಿ. ಆದರೆ ಧರ್ಮಸ್ಥಳ ಸಂಸ್ಥೆ ಪ್ರತೀ ಮನೆಯಲ್ಲೂ ಒಬ್ಬ ಮಹಿಳೆಯನ್ನು ಆರ್ಥಿಕ ಮಂತ್ರಿಯನ್ನಾಗಿ ಮಾಡಿದೆ.
–ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ
ಧರ್ಮಸ್ಥಳ ಸಂಸ್ಥೆ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸುವ ಮೂಲಕ ರಾಜ್ಯದ ಸಾವಿರಾರು ಬಡ ಕುಟುಂಬಗಳಿಗೆ ನೆರವಾಗಿದೆ. ಈ ಮೂಲಕ ಜಾತಿ, ಧರ್ಮಗಳನ್ನು ಮೀರಿ ಸೌಹಾರ್ದ ಮೆರೆದಿದೆ.
–ಗೋವಿಂದ ಕಾರಜೋಳ, ಸಂಸದ
ಸರ್ಕಾರ ಮಾಡುವ ಕಾರ್ಯವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ. ರೈತರು, ಮಹಿಳೆಯರು, ದುರ್ಬಲರನ್ನು ಮುಖ್ಯವಾಹಿನಿಗೆ ತರುವ ಈ ಸಂಸ್ಥೆಯ ಕಾರ್ಯಗಳು ವಿಶ್ವಕ್ಕೇ ಮಾದರಿ.
–ಎಚ್.ಆಂಜನೇಯ, ಮಾಜಿ ಸಚಿವ
ಧರ್ಮಸ್ಥಳ ಸಂಸ್ಥೆ ಸಾವಿರಾರು ಕುಟುಂಬಗಳಿಗೆ ಬೆಳಕಾಗಿದೆ. ಪ್ರಸಾದ ರೂಪದಲ್ಲಿ ಪಡೆದ ಸಾಲವನ್ನು ಪುಷ್ಪಾರ್ಚನೆಯಂತೆ ಮರುಪಾವತಿ ಮಾಡಬೇಕು.