ಹೊಳಲ್ಕೆರೆ: 'ಮಕ್ಕಳಲ್ಲಿನ ರಕ್ತಹೀನತೆ ಗುರುತಿಸಿ ಪೌಷ್ಠಿಕಾಂಶ ಒದಗಿಸಲು ಸರ್ಕಾರ ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ (ಎಎಂಪಿಕೆ) ಯೋಜನೆ ಜಾರಿಗೊಳಿಸಿದೆ’ ಎಂದು ಡಾ.ಮುಕ್ತಾ ತಿಳಿಸಿದರು.

ಪಟ್ಟಣದ ಎನ್ಇಎಸ್ ಸರ್ಕಾರಿ ಶಾಲೆಯಲ್ಲಿ ಗುರುವಾರ ಆರ್ಬಿಎಸ್ಕೆ ಯೋಜನೆಯಡಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಅವರು ಮಾತನಾಡಿದರು.

‘ನವಜಾತ ಶಿಶುವಿನಿಂದ 18 ವರ್ಷದ ಎಲ್ಲರಿಗೂ ರಕ್ತಪರೀಕ್ಷೆ ನಡೆಸಲಾಗುವುದು. ಹಿಮೋಗ್ಲೋಬಿನ್ ಪರೀಕ್ಷೆಸಿ ರಕ್ತಹೀನತೆ ಇರುವ ಮಕ್ಕಳನ್ನು ಗುರುತಿಸಲಾಗುವುದು. ಅನೀಮಿಯಾದಿಂದ ಬಳಲುವ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಯಲ್ಲಿರುವ ಎನ್ಆರ್ಸಿ ಕೇಂದ್ರಕ್ಕೆ ದಾಖಲಿಸಲಾಗುವುದು. ಈ ಮೂಲಕ ಅನೀಮಿಯ ಮುಕ್ತ ಕರ್ನಾಟಕ ಮಾಡುವುದು ಸರ್ಕಾರದ ಉದ್ದೇಶ’ ಎಂದರು.

‘ವರ್ಷಕ್ಕೆ 2 ಬಾರಿ ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಒಂದು ಬಾರಿ ಶಾಲಾ– ಕಾಲೇಜುಗಳಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗುವುದು. ಹುಟ್ಟು ನ್ಯೂನ್ಯತೆ ಹಾಗೂ ಗಂಭೀರ ಕಾಯಿಲೆ ಪ್ರಕರಣಗಳು ಕಂಡುಬಂದರೆ ಉಚಿತ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗುವುದು’ ಎಂದು ಡಾ.ಕೆ.ಪಿ. ಆನಂದ್ ಮಾಹಿತಿ ನೀಡಿದರು.

ಶುಶ್ರೂಶಕಿ ಜಯಮ್ಮ, ನೇತ್ರ ಸಹಾಯಕಿ ರೆಹಮತ್ ಉನ್ನೀಸಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.