ಹೊಸದುರ್ಗ: ತಾಲ್ಲೂಕಿನ ಕೆಲ್ಲೋಡು ಕನಕ ಗುರುಪೀಠದಲ್ಲಿ ಕನಕ ಜಯಂತ್ಯುತ್ಸವ ಪ್ರಯುಕ್ತ 8ನೇ ವರ್ಷದ ಲಕ್ಷ ದೀಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನವಂಬರ್ 5 ರಿಂದ 8 ರವರೆಗೆ ನಾಲ್ಕು ದಿನಗಳು ಕೆಲ್ಲೋಡು ಕನಕ ಗುರುಪೀಠದ ಕನಕಧಾಮದಲ್ಲಿ ಏರ್ಪಡಿಸಲಾಗಿದೆ ಎಂದು ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.

ಕೆಲ್ಲೋಡು ಕನಕ ಗುರುಪೀಠದಲ್ಲಿ ನವಂಬರ್ 5 ರಂದು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಗುರು ರೇವಣಸಿದ್ದೇಶ್ವರ ಮಠದ ಒಡೆಯರ್ ಸಾನ್ನಿಧ್ಯದಲ್ಲಿ ನಡೆಯಲಿದೆ.

ನ. 05 ರಂದು ಬೆಳಿಗ್ಗೆ ತಾಲ್ಲೂಕು ಮಟ್ಟದ ಕಬ್ಬಡಿ ಕ್ರೀಡಾಕೂಟವನ್ನು ಶಾಸಕ ಬಿ. ಜಿ. ಗೋವಿಂದಪ್ಪ ಉದ್ಘಾಟಿಸುವರು. ಮಧ್ಯಾಹ್ನ 3 ಗಂಟೆಗೆ ಉಪನ್ಯಾಸಕ ನಿಸಾರ್ ಅಹಮದ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಲಿದ್ದು, ಕಸಾಪ ತಾಲ್ಲೂಕು ಅಧ್ಯಕ್ಷ ಶಾಂತಪ್ಪ ಉದ್ಘಾಟಿಸುವರು.

ಸಂಜೆ 6 ಗಂಟೆಗೆ ಕನಕ ಹುಣ್ಣಿಮೆ ಕಾರ್ಯಕ್ರಮವನ್ನು ಗುಬ್ಬಿ ರಂಗಸ್ವಾಮಯ್ಯ ಉದ್ಘಾಟನೆ ಮಾಡಲಿದ್ದು, ಸರೂರು ಶಾಂತೊಡೆಯರ ಸಂಪ್ರದಾಯ ಕುರಿತು ಶಿವಮೊಗ್ಗದ ಸಂಶೋಧಕರಾದ ಲಿಂಗದಹಳ್ಳಿ ಹಾಲಪ್ಪ ವಿಷಯ ಮಂಡಿಸಲಿದ್ದಾರೆ.

ಕಬಡ್ಡಿ ಪಂದ್ಯಾವಳಿ: ನ. 6 ರಂದು 14 ರಿಂದ 17 ವರ್ಷ ದ ಮಕ್ಕಳಿಗೆ ತಾಲ್ಲೂಕು ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಕನಕ ಕಪ್ 2025ನ್ನು ಇನ್ ಸೈಟ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಉದ್ಘಾಟಿಸಲಿದ್ದಾರೆ.

ಟಗರಿನ ಕಾಳಗ: ನವಂಬರ್ 7 ರಂದು ರಾಜ್ಯ ಮಟ್ಟದ ಭಾರಿ ಟಗರಿನ ಕಾಳಗವನ್ನು ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ವಿವಿಧ ಹಂತದ ಟಗರು ಕಾಳಗ ಏರ್ಪಡಿಸಲಾಗಿದ್ದು, ಸಾಕಷ್ಟು ಆಕರ್ಷಕ ಬಹುಮಾನ ನೀಡಲಾಗುತ್ತಿದೆ.

ಕೖಷಿಮೇಳ: ನವಂಬರ್ 8, ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗ ಕೃಷಿ ಇಲಾಖೆಯ ಸಹಯೋಗದಲ್ಲಿ ಕೃಷಿಮೇಳ, ಸಿರಿಧಾನ್ಯ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ಶಾಸಕ ಬಿ. ಜಿ. ಗೋವಿಂದಪ್ಪ ಉದ್ಘಾಟನೆ ಮಾಡಲಿದ್ದಾರೆ. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಬಿ. ಮಂಜುನಾಥ್, ಉಪ ಕೃಷಿ ನಿರ್ದೇಶಕ ಕೆ. ಎಸ್. ಶಿವಕುಮಾರ್, ಉಪ ಕೃಷಿ ನಿರ್ದೇಶಕ ಉಮೇಶ್, ತಹಶೀಲ್ದಾರ್ ತಿರುಪತಿ ಪಾಟೀಲ್, ಇಓ ಸುನಿಲ್ ಕುಮಾರ್ ಭಾಗವಹಿಸಲಿದ್ದಾರೆ. ಸಿರಿಧಾನ್ಯಗಳ ವಿಚಾರ ಸಂಕಿರಣದಲ್ಲಿ ವಿಜ್ಞಾನಿಗಳಾದ ಶರಣಪ್ಪ ಜಂಗಂಡಿ, ಬಸವೇಣಪ್ಪ, ಸಂಜಯ್, ಓಂಕಾರಪ್ಪ, ನಂದಿನಿ ಭಾಗವಹಿಸಲಿದ್ದಾರೆ.

ಲಕ್ಷ ದೀಪೋತ್ಸವ: ನ. 8 ರಂದು ಸಂಜೆ ಕಾಗಿನೆಲೆ ಮಹಾಸಂಸ್ಥಾನ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಸಾನಿಧ್ಯದಲ್ಲಿ. ರಾಜ್ಯದ ವಿವಿಧ ಮಠಾಧೀಶರ ಜನಪ್ರತಿನಿಧಿಗಳ, ಸಮಾಜದ ಮುಖಂಡರ ಸಮ್ಮುಖದಲ್ಲಿ ಜರುಗಲಿದೆ.

ಕಾರ್ಯಕ್ರಮವನ್ನು ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟನೆ ನೆರವೇರಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳ ರಾಜ್ಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್. ಎಂ. ರೇವಣ್ಣ, ಶಾಸಕರಾದ ಗೋವಿಂದಪ್ಪ, ಚಿಕ್ಕ ನಾಯಕನಹಳ್ಳಿ ಸುರೇಶ್ ಬಾಬು, ತರೀಕೆರೆ ಶ್ರೀನಿವಾಸ್, ಕಡೂರು ಆನಂದ್, ಕೊಪ್ಪಳ ವಿವಿಯ ಕುಲಪತಿ ಬಿ. ಕೆ. ರವಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಹಾಸನ ಶಿವಪ್ಪ, ಬಯಲು ಸೀಮೆ ಪ್ರಾಧಿಕಾರದ ಅಧ್ಯಕ್ಷ ಮಂಜಪ್ಪ ಬಿಬಿಎಂಪಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಡಾ. ಹನುಮಂತಪ್ಪ ವಿವಿಧ ಮುಖಂಡರು ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.