ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ವದಂತಿಗಳಿಗೆ ಕಿವಿಕೊಡಬೇಡಿ: ಡಾ.ಜಯಸಿಂಹ

Published 7 ಮೇ 2023, 5:08 IST
Last Updated 7 ಮೇ 2023, 5:08 IST
ಅಕ್ಷರ ಗಾತ್ರ

ಹೊಳಲ್ಕೆರೆ: 'ನಾನು ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ" ಎಂದು ಪಕ್ಷೇತರ ಅಭ್ಯರ್ಥಿ ಡಾ.ಎಲ್. ಜಯಸಿಂಹ ಲೋಕನಾಥ್ ಹೇಳಿದರು.

ತಾಲ್ಲೂಕಿನ ತಾಳ್ಯ ಹೋಬಳಿಯ ಹಲವು ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಅವರು ಮಾತನಾಡಿದರು.

‘ನಾನು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಬೇರೆಯವರಿಗೆ ಬೆಂಬಲ ನೀಡಿದ್ದೇನೆ’ ಎಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಇಂತಹ ಯಾವುದೇ ವದಂತಿಗಳಿಗೆ ಮತಾರರು ಕಿವಿಕೊಡಬಾರದು. ನಾಮಪತ್ರ ವಾಪಸ್ ಪಡೆಯಲು ಅವಕಾಶ ಇದ್ದಾಗ ಅನೇಕರು ನನಗೆ ನಾಮಪತ್ರ ವಾಪಸ್ ಪಡೆಯುವಂತೆ ಒತ್ತಡ ಹಾಕಿದ್ದರು. ಆದರೆ, ನಾನು ನಾಮಪತ್ರ ಸಲ್ಲಿಸಿದ ದಿನವೇ ಚುನಾವಣೆಯಿಂದ ಹಿಂದೆ ಸರಿಯದಿರಲು ನಿಶ್ಚಯಿಸಿದ್ದೆ" ಎಂದರು.

‘ಗೊಂದಲ ಸೃಷ್ಟಿಸಿ ಮತ ಪಡೆಯಲು ನನ್ನ ಪ್ರತಿಸ್ಪರ್ಧಿಗಳು ಇಂತಹ ಕುತಂತ್ರ ನಡೆಸುತ್ತಿದ್ದಾರೆ. ಆದರೆ, ಕ್ಷೇತ್ರದ ಜನರ ಆಶೀರ್ವಾದ ಇರುವವರೆಗೆ ನಾನು ಹೆದರುವುದಿಲ್ಲ. ಕ್ಷೇತ್ರದ ಜನ ಬದಲಾವಣೆ ಬಯಸಿ ನನ್ನನ್ನು ತಾಲ್ಲೂಕು ವೈದ್ಯಾಧಿಕಾರಿ ಹುದ್ದೆಗೆ ರಾಜೀನಾಮೆ ಕೊಡಿಸಿ ಚುನಾವಣೆಗೆ ನಿಲ್ಲಿಸಿದ್ದಾರೆ. ಅವರ ಬೆಂಬಲ ಸದಾ ಇರುತ್ತದೆ. ಕ್ಷೇತ್ರದಲ್ಲಿ ನನಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲ ನೋಡಿ ವಿರೋಧಿಗಳು ಕಂಗಾಲಾಗಿದ್ದಾರೆ. ಇಂತವರಿಗೆ ಜನ ಮೇ 10 ಕ್ಕೆ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಡಾ.ಜಯಸಿಂಹ ಹೇಳಿದರು.

ಶರತ್ ಕುಮಾರ್ ಪಾಟೀಲ್, ಮೋಹನ್ ನಾಗರಾಜ್, ಗುರುಮೂರ್ತಿ, ಮಂಜುನಾಥ ನಾಯ್ಕ, ಕುಮಾರ ನಾಯ್ಕ, ಚಂದ್ರ ನಾಯ್ಕ್, ವೆಂಕಟೇಶ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT