ಚಿತ್ರದುರ್ಗ: ಕಾಂಗ್ರೆಸ್ ಅಭ್ಯರ್ಥಿ ಬಿ.ಸೋಮಶೇಖರ ಅವರ ಗೆಲುವು ಬಹುತೇಕ ಖಚಿತವಾಗಿತ್ತು. ಗೆಲುವಿನ ಉತ್ಸಾಹದಲ್ಲಿ ಮೈಮರೆತ ಪರಿಣಾಮವಾಗಿ ಸೋಲು ಒಪ್ಪಿಕೊಳ್ಳಬೇಕಾಗಿದೆ. ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುತ್ತೇವೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ತಿಳಿಸಿದ್ದಾರೆ.

‘ಬಿ.ಸೋಮಶೇಖರ ಅವರ ಸರಳತೆಗೆ ಪಕ್ಷದ ಕಾರ್ಯಕರ್ತರು, ಮತದಾರರು ಮನಸೋತಿದ್ದರು. ಕ್ಷೇತ್ರಕ್ಕೆ ಹೊಸ ಮುಖವಾದರೂ ಸಿಕ್ಕ 16 ದಿನಗಳಲ್ಲಿ ಎರಡೂ ಜಿಲ್ಲೆಯನ್ನು ಸುತ್ತಾಡಿದರು. ಎಲ್ಲೆಡೆ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಇದಕ್ಕೆ ಅವರು ಪಡೆದ ಮತಗಳೇ ಸಾಕ್ಷಿಯಾಗಿವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿದ್ದ ಚಿತ್ರದುರ್ಗ ವಿಧಾನಪರಿಷತ್ ಕ್ಷೇತ್ರದಲ್ಲಿ ಪಕ್ಷದ ಬೆಂಬಲಿಗರೇ ಗೆಲುವು ಸಾಧಿಸುತ್ತಿದ್ದರು. ಹೀಗಾಗಿ, ಗೆದ್ದೇ ಬಿಟ್ಟೆವು ಎಂದು ನಾವೆಲ್ಲರೂ ಅತ್ಯಂತ ಉತ್ಸಾಹದಿಂದ ಇದ್ದೆವು. ಕೊನೆಗಳಿಗೆಯಲ್ಲಿ ಆಡಳಿತ ಪಕ್ಷದ ತಂತ್ರಗಾರಿಕೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಮ್ಮ ಕೈಯಲ್ಲಿದ್ದ ಗೆಲುವನ್ನು ಬಿಜೆಪಿಗೆ ನಾವೇ ಕೊಟ್ಟಂತೇ ಆಗಿದೆ. ಇಲ್ಲಿ ನಾವು ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.