ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಟ್ ಅಂಶ ಕಡಿಮೆ ಎಂದು ಹಾಲು ಖರೀದಿಗೆ ಹಿಂದೇಟು: ಚರಂಡಿಗೆ ಸುರಿದು ರೈತರ ಆಕ್ರೋಶ

Last Updated 7 ಜೂನ್ 2021, 5:50 IST
ಅಕ್ಷರ ಗಾತ್ರ

ಹಿರಿಯೂರು (ಚಿತ್ರದುರ್ಗ): ಫ್ಯಾಟ್ ಅಂಶ ಶೇ 3.5 ಕಿಂತ ಕಡಿಮೆ ಇದೆ ಎಂಬ ಕಾರಣ ನೀಡಿ ಹಾಲು ಖರೀದಿಗೆ ಹಿಂದೇಟು ಹಾಕಿದ ಕೆಎಂಎಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ಹಾಲನ್ನು ಚರಂಡಿಗೆ ಸುರಿದ ಘಟನೆ ತಾಲ್ಲೂಕಿನ ಲಕ್ಕವ್ವನಹಳ್ಳಿಯಲ್ಲಿ ನಡೆದಿದೆ.

ಭಾನುವಾರ ರಾತ್ರಿ ಹಾಲು ಸುರಿದ ರೈತರು ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕೆಎಂಎಫ್ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಬಿಸಿಲು ಹೆಚ್ಚಿರುವ ಕಾರಣ ಹಾಲಿನಲ್ಲಿ ಫ್ಯಾಟ್ ಅಂಶ ಕಡಿಮೆ ಬರುತ್ತಿದೆ. ವರ್ಷವೆಲ್ಲ ಶೇ 4.1 ರಷ್ಟು ಗುಣಮಟ್ಟ ಇರುವ ಹಾಲನ್ನು ಸರಬರಾಜು ಮಾಡುತ್ತಿದ್ದೇವೆ. ಒಂದೂವರೆ ತಿಂಗಳು ಬಿಸಿಲು ಹೆಚ್ಚಿರುವ ಕಾರಣ ಹಸುಗಳ ದೇಹದಲ್ಲಿ ಉಷ್ಣಾಂಶ ಹೆಚ್ಚಿ ಹಾಲಿನ ಫ್ಯಾಟ್ ಅಂಶ ಕಡಿಮೆಯಾಗುತ್ತದೆ .ಇದನ್ನು ಕೆಎಂಎಫ್ ನವರು ಸರಿದೂಗಿಸಿಕೊಳ್ಳದೇ, ರೈತರ ಮೇಲೆ ಗದಾಪ್ರಹಾರ ಮಾಡುವುದು ಸರಿಯಲ್ಲ. ಇದನ್ನು ಹೀಗೆ ಮುಂದುವರಿಸಿದರೆ ಹಾಲು ಉತ್ಪಾದಕರು ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT