ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಚಿತ್ರದುರ್ಗ: ಕಲ್ಲುಕುಟಿಕರಿಗೆ ಫ್ಲೋರೈಡ್‌ ನೀರೇ ಗತಿ; ಹೆಚ್ಚಿದ ಅನಾರೋಗ್ಯ

Published : 29 ಜುಲೈ 2024, 7:22 IST
Last Updated : 29 ಜುಲೈ 2024, 7:22 IST
ಫಾಲೋ ಮಾಡಿ
Comments
ಗ್ರಾಮದ ಸಮಸ್ಯೆ ಹೇಳಿಕೊಳ್ಳುತ್ತಿರುವ ಮಹಿಳೆ
ಗ್ರಾಮದ ಸಮಸ್ಯೆ ಹೇಳಿಕೊಳ್ಳುತ್ತಿರುವ ಮಹಿಳೆ
ನೀರು ಪರೀಕ್ಷೆಯಲ್ಲಿ ಫ್ಲೋರೈಡ್‌ ಅಂಶ ಪತ್ತೆ ಶುದ್ಧ ನೀರು ಘಟಕ ಸ್ಥಾಪನೆಗೆ ಗ್ರಾಮಸ್ಥರ ಒತ್ತಾಯ ದಾಸರಹಳ್ಳಿಯಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲ
ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಶುದ್ಧ ನೀರು ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇವೆ. ಗ್ರಾ.ಪಂ ಸಭೆ ನಡೆಸಿ ದಾಸರಹಳ್ಳಿಗೆ ಮೂಲ ಸೌಲಭ್ಯ ಒದಗಿಸಲಾಗುವುದು.
ಫಾತಿಮಾ ಬೀಬಿ ತಹಶೀಲ್ದಾರ್‌ ಹೊಳಲ್ಕೆರೆ
ಫ್ಲೋರೈಡ್‌ಯುಕ್ತ ನೀರು ಸೇವನೆಯಿಂದ ಗ್ರಾಮದಲ್ಲಿ ದಿನೇ ದಿನೇ ಅನಾರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಕಲ್ಲು ಒಡೆದು ಬದುಕುವವರ ಬಲಕ್ಕೆ ಪೆಟ್ಟು ಬಿದ್ದರೆ ಏನು ಗತಿ ಎಂಬ ಪ್ರಶ್ನೆ ಕಾಡುತ್ತಿದೆ.
ಆರ್‌.ವಿಜಯ್‌ ಗ್ರಾಮ ಪಂಚಾಯಿತಿ ಸದಸ್ಯ
‘ಡೀಸೆಲ್‌ ಬತ್ತಿ’ಯ ಅವಲಂಬನೆ
ದಾಸರಹಳ್ಳಿ ಗ್ರಾಮದ ಗುಡಿಸಲುಗಳು ವಿದ್ಯುಚ್ಛಕ್ತಿಯಿಂದ ವಂಚಿತಗೊಂಡಿವೆ. ಬಹುತೇಕ ಮನೆಗಳಿಗೆ ಹಕ್ಕುಪತ್ರಗಳಿಲ್ಲದ ಕಾರಣ ವಿದ್ಯುತ್‌ ಸಂಪರ್ಕ ಒದಗಿಸಲು ಸಾಧ್ಯವಾಗಿಲ್ಲ. ಜನರು ಡೀಸೆಲ್‌ ತಂದು ಹಣತೆ (ಡೀಸೆಲ್‌ ಬತ್ತಿ) ಮಾಡಿಕೊಂಡು ಬೆಳಕು ಪಡೆಯುತ್ತಿದ್ದಾರೆ. ಮಂದ ಬೆಳಕಿನ ಕಾರಣಕ್ಕೆ ಹಲವರ ಕಣ್ಣುಗಳು ಮಂಜಾಗಿವೆ. ‘ಮೊದಲೆಲ್ಲಾ ಸೀಮೆಎಣ್ಣೆ ತಂದು ಹಣೆತೆಯಿಂದ ಬೆಳಕು ಪಡೆಯುತ್ತಿದ್ದೆವು. ಈಗ ಎಲ್ಲೂ ಸೀಮೆಎಣ್ಣೆ ಸಿಗುತ್ತಿಲ್ಲ ಹೀಗಾಗಿ ಡೀಸೆಲ್‌ ಹಣತೆಯೇ ನಮಗೆ ಬೆಳಕಿನ ಆಧಾರವಾಗಿದೆ. ಡೀಸೆಲ್‌ ಬೆಲೆ ಹೆಚ್ಚಿರುವ ಕಾರಣ ನಮ್ಮ ದುಡಿಮೆಯ ಬಹುಪಾಲು ಡೀಸೆಲ್‌ಗಾಗಿ ವ್ಯಯವಾಗುತ್ತಿದೆ‘ ಎನ್ನುತ್ತಾರೆ ಗ್ರಾಮದ ಮಂಜುಳಮ್ಮ.
ಗುಳೇ ಹೋಗುವ ಜನರು
ಅರಣ್ಯ ಪ್ರದೇಶಗಳಲ್ಲಿ ಕಲ್ಲುಗಳನ್ನು ತರಲು ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಕುಲಕಸುಬು ಮಾಡುವುದಕ್ಕೂ ಹಲವು ತಡೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ದಾಸರಹಳ್ಳಿ ಗ್ರಾಮದ ಜನರು ಉದ್ಯೋಗ ಅರಸಿ ನಗರ ಪಟ್ಟಣ ಪ್ರದೇಶಗಳಿಗೆ ಗುಳೇ ಹೋಗುತ್ತಿದ್ದಾರೆ. ಪಾಲಕರು ಗುಳೇ ಹೋಗುವ ಕಾರಣ ಮಕ್ಕಳು ಸರಿಯಾಗಿ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆಯಿದ್ದು 28 ವಿದ್ಯಾರ್ಥಿಗಳು ಇದ್ದಾರೆ. ಬಹುತೇಕ ಮಕ್ಕಳು ಅರ್ಧಕ್ಕೆ ಶಾಲೆ ತ್ಯಜಿಸುತ್ತಿದ್ದು ವಿದ್ಯಾಭ್ಯಾಸದಿಂದಲೂ ವಂಚಿತರಾಗುತ್ತಿದ್ದಾರೆ. 5ನೇ ತರಗತಿಯಿಂದ ಮಕ್ಕಳು ಬೇರೆ ಊರುಗಳಿಗೆ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಓದುವವರ ಸಂಖ್ಯೆ ಕುಸಿಯುತ್ತಿದೆ.
ಕಾಡುತ್ತಿದೆ ಬೆಂಕಿಯ ಭಯ
ದಾಸರಹಳ್ಳಿಯಲ್ಲಿ ಗುಡಿಸಲುಗಳು ಹೆಚ್ಚಿನ ಸಂಖ್ಯೆಯಲ್ಲಿರುವರ ಕಾರಣ ಬೆಂಕಿ ಅನಾಹುತದ ಭಯ ಜನರನ್ನು ಸದಾ ಕಾಡುತ್ತದೆ. ಬೇಸಿಗೆ ಅವಧಿಯಲ್ಲಿ ಬೆಂಕಿಯಿಂದ ಹಲವು ಗುಡಿಸಲುಗಳು ಸುಟ್ಟು ಹೋದ ಉದಾಹರಣೆಗಳಿವೆ. ಹೀಗಾಗಿ ಜನರು ಡೀಸೆಲ್‌ ಬತ್ತಿಯನ್ನು ಬಹಳ ಎಚ್ಚರಿಕೆಯಿಂದ ಬಳಸುವ ಅನಿವಾರ್ಯತೆ ಇದೆ. ಮಳೆಗಾಲದಲ್ಲೂ ಗ್ರಾಮಸ್ಥರು ನೆಮ್ಮದಿಯಿಂದ ಬದುಕುವ ಪರಿಸ್ಥಿತಿ ಇಲ್ಲ. ಗುಡಿಸಲುಗಳು ಇಳಿಜಾರಿನ ಜಾಗದಲ್ಲಿದ್ದು ಮಳೆ ನೀರು ಒಳಗೆ ನುಗ್ಗಿ ಬರುತ್ತದೆ. ಮಳೆಗಾಲ ಮಳೆ ನೀರು ನುಗ್ಗುವ ಭಯದಲ್ಲಿ ಬದುಕಿದರೆ ಬೇಸಿಗೆಕಾಲದಲ್ಲಿ ಬೆಂಕಿಯ ಭಯದಿಂದಲೇ ಬದುಕುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT