ವಾಹನ ನಿಲುಗಡೆ ಸ್ಥಳವಾಗಿರುವ ಚಿಕ್ಕಜಾಜೂರು ಸಮೀಪದ ಗುಂಜಿಗನೂರು ಪ್ರಯಾಣಿಕರ ತಂಗುದಾಣ
ಗ್ರಾಮೀಣ ಪ್ರದೇಶದ ಪ್ರಯಾಣಿಕರ ತಂಗುದಾಣಗಳಲ್ಲಿ ಅಕ್ರಮ ಚಟುವಟಿಕೆ ಹೆಚ್ಚಾಗಿವೆ. ಇವುಗಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸರು ಹಾಗೂ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಕಾಣುತ್ತಿದೆ. ಕೂಡಲೇ ಕ್ರಮವಹಿಸಿ ಪ್ರಯಾಣಿಕ ಸ್ನೇಹಿಗೊಳಿಸಬೇಕು
ಜಿ. ನಟರಾಜ್ ಅಧ್ಯಕ್ಷರು ವಾಯು ವಿಹಾರ ಸಂಘ ಚಿಕ್ಕಜಾಜೂರು
ಪ್ರಯಾಣಿಕರ ತಂಗುದಾಣಗಳಲ್ಲಿ ಸ್ವಚ್ಛತೆ ಇಲ್ಲದೇ ಮಹಿಳಾ ಪ್ರಯಾಣಿಕರು ಬಿಸಿಲಿನಲ್ಲಿ ನಿಲ್ಲುವಂತಾಗಿದೆ. ಆಯಾ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತೆ ಕೈಗೊಂಡರೆ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.
ಬಿ.ಟಿ.ರಂಗನಾಥ್ ನಾಗರಿಕರು
ನಾಯಕನಹಟ್ಟಿ ಒಳಮಠದ ರಸ್ತೆಯ ನಾಗರಕಟ್ಟೆ ಬಳಿ ನಿರ್ಮಿಸಿರುವ ಬಸ್ ತಂಗುದಾಣಗಳಿಗೆ ವಿದ್ಯುತ್ ದೀಪ ಅಳವಡಿಸಬೇಕು. ಅಲ್ಲಿ ರಾತ್ರಿ ವೇಳೆ ಮಹಿಳೆಯರು ಮಕ್ಕಳು ನಿಲ್ಲಲು ಆಗದ ಸ್ಥಿತಿ ಇದೆ
ಟಿ.ರೂಪಾ ನಾಯಕನಹಟ್ಟಿ
ತಂಗುದಾಣಗಳು ದಿನ ಕಳೆದಂತೆ ಶೌಚಾಲಯಗಳಾಗಿ ಬೀಡಾಡಿ ದನ ಬೀದಿ ನಾಯಿಗಳ ಆಶ್ರಯ ತಾಣಗಳಾಗುತ್ತಿವೆ. ಶಿಥಿಲಾವಸ್ಥೆ ತಲುಪಿರುವ ತಂಗುದಾಣಗಳ ದುರಸ್ತಿಗೆ ಅಧಿಕಾರಿಗಳು ಮುಂದಾಗಬೇಕು