ಹೊಸದುರ್ಗ: ‘ತಾಲ್ಲೂಕಿನ ಕೆರೆಗಳಿಗೆ, ರೈತರ ಜಮೀನುಗಳಿಗೆ ನೀರು ಕೊಡುವುದು ನನ್ನ ಮೊದಲ ಆದ್ಯತೆಯಾಗಿದೆ. ವಿವಿ ಸಾಗರ ಹಿನ್ನೀರು ಪ್ರದೇಶದ ರೈತರು ಎದುರಿಸುತ್ತಿರುವ ಸಮಸ್ಯೆ ನಿವಾರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು’ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ತಾಲ್ಲೂಕಿನ ವಿ.ವಿ. ಸಾಗರ ಜಲಾಶಯದ ಹಿನ್ನೀರಿನಿಂದ ಲಕ್ಕಿಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಪೈಪ್ಲೈನ್ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಚೆಕ್ಡ್ಯಾಂಗಳನ್ನು ನಿರ್ಮಿಸುವ ಮೂಲಕ ವೇದಾವತಿ ನದಿ ಪಾತ್ರದಲ್ಲಿ 35 ಕಿ.ಮೀ ನೀರು ನಿಲ್ಲಿಸಿದ್ದೇವೆ. ಆ ಭಾಗಗಳಲ್ಲಿ ಅಂತರ್ಜಲ ಸಾಕಷ್ಟು ವೃದ್ಧಿಯಾಗಿದೆ. ಹಿನ್ನೀರಿನಿಂದ ಸಾಕಷ್ಟು ಹಾನಿಯಾಗಿದೆ. ಈ ಭಾಗದ ಸೇತುವೆ, ರಸ್ತೆಗಳು ಹಾಳಾಗಿವೆ. ಹಾಗಾಗಿ 6 ಪಂಚಾಯತಿಗಳ ವ್ಯಾಪ್ತಿಯಲ್ಲಿ ₹ 87 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ’ ಎಂದು ಹೇಳಿದರು.

‘ವಿ.ವಿ.ಸಾಗರ ಜಲಾಶಯ ಹತ್ತಿರವಿದ್ದರೂ, ಲಕ್ಕಿಹಳ್ಳಿ ಪ್ರದೇಶ ವ್ಯಾಪ್ತಿಯ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ವಿ.ವಿ.ಸಾಗರಕ್ಕೆ ವೇದಾವತಿ ನದಿ ನೀರು ಮಾತ್ರ ಹರಿದು ಬರಲಿದೆ ಎಂದು ಅಧಿಕಾರಿಗಳು ಭಾವಿಸಿದ್ದಾರೆ. ಜಲಾಶಯಕ್ಕೆ ಗಂಜಿಗೆರೆ ಹಾಗೂ ಮಾದರಹಳ್ಳದ ಮೂಲಕ ತಿಪಟೂರು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ನೀರು, ಬಲ್ಲಾಳ ಸಮುದ್ರ ಹಳ್ಳದ ಮೂಲಕ ಕಡೂರು, ತರೀಕೆರೆ, ಅರಸೀಕೆರೆ ತಾಲ್ಲೂಕಿನ ನೀರು, ಗುಂಡಿ ತಾಯಿಹಳ್ಳದ ಮೂಲಕ ಹೊಳಲ್ಕೆರೆ ತಾಲ್ಲೂಕಿನ ನೀರು ಹರಿದು ಬರುವುದರಿಂದ 136 ಅಡಿಗೆ ತಲುಪುತ್ತದೆ. ಹೀಗಾಗಿ, 130 ಅಡಿಗೆ ನೀರು ನಿಲ್ಲಬೇಕು’ ಎಂದು ಶಾಸಕರು ಹೇಳಿದರು.

‘ಲಕ್ಕಿಹಳ್ಳಿ ಗ್ರಾಮದವರು ಸ್ವಯಂ ಪ್ರೇರಿತರಾಗಿ ಗ್ರಾಮಕ್ಕೆ ಕುಡಿಯುವ ನೀರು ತರಲು ಹೊರಟಿರುವ ಕಾರ್ಯಕ್ಕೆ ನನ್ನ ಮೆಚ್ಚುಗೆ ಇದೆ. ಇದೀಗ, ಕೆರೆಯಲ್ಲಿ ನೀರಿಲ್ಲ ಎಂಬ ಕಾರಣಕ್ಕಾಗಿ ಒಂದುಗೂಡಿ ನೀರು ತರುವ ಪ್ರಯತ್ನ ಮಾಡುವ ಹುಮ್ಮಸ್ಸು ಬಂದಿದೆ. ಇದು ನಿಮ್ಮ ಮಕ್ಕಳ ಜೀವನಕ್ಕೆ ಬಹಳ ಒಳ್ಳೆಯದು. ಇದನ್ನು ಹಿಂದೆಯೇ ಮಾಡಬೇಕಿತ್ತು. ನಿಮಗೆ ತಡವಾಗಿ ನೆನಪಾಗಿದೆ’ ಎಂದು ಶಾಸಕರು ಸಂತಸ ವ್ಯಕ್ತಪಡಿಸಿದರು.

‘ಪುನರ್ಸಸತಿ, ಪುನರ್ ಚೇತನ ಯೋಜನೆಯಡಿ 6 ಪಂಚಾಯಿತಿ ವ್ಯಾಪ್ತಿಯ ವಸತಿ ರಹಿತರಿಗೆ ಮನೆ ನಿರ್ಮಾಣಕ್ಕೆ ₹ 7 ಲಕ್ಷ ನೀಡಲಾಗುವುದು. ಉಳಿದ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕಾಗಿ ಫಲಾನುಭವಿಗಳಿಗೆ ₹ 3.50 ಅನುದಾನ ನೀಡಲಾಗುವುದು’ ಎಂದು ಹೇಳಿದರು.

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿ ಮುದ್ದಪ್ಪ, ಸದಸ್ಯರಾದ ಲಕ್ಷ್ಮೀದೇವಿ ಸೋಮಶೇಖರ್, ಲೀಲಾವತಿ ದಾರಮಾದಪ್ಪ, ಲಕ್ಷ್ಮೀದೇವಿ ಲಕ್ಷ್ಮಣ, ಪ್ರಭಮ್ಮ, ದಾರಮಾದಪ್ಪ, ರಾಜಪ್ಪ, ಅರುಣ್ ಸ್ವಾಮಿ, ಬೆಸ್ಕಾಂ ಎಇಇ ಕಿರಣ್ ರೆಡ್ಡಿ, ಎಂಜಿನಿಯರ್ ಸುರೇಶ್, ಮುಖಂಡರಾದ ವಿಜಯಲಕ್ಷ್ಮಿ ಪ್ರಕಾಶ್, ಬಸವರಾಜಪ್ಪ, ಗುಂಡಪ್ಪ, ವೈ.ಮುದ್ದಪ್ಪ, ಸೋಮಶೇಖರ್, ಚಂದ್ರಶೇಖರ್ ಮತ್ತು ಗುರುಮೂರ್ತಿ ಸೇರಿ ಲಕ್ಕಿಹಳ್ಳಿ ಮತ್ತು ಇನ್ನಿತರ ಗ್ರಾಮಗಳ ಜನರು ಪಾಲ್ಗೊಂಡಿದ್ದರು.

ಕೋಡಿ ಬಾಯಿಗೆ ಬೀಗ ಹಾಕಲು ₹ 200 ಕೋಟಿ

‘ವಿ.ವಿ.ಸಾಗರ ಜಲಾಶಯದ ಕೋಡಿಗೆ ಗೇಟ್ ಅಳವಡಿಸಿದರೆ ಹಿನ್ನೀರಿನ ಗ್ರಾಮಗಳ ಜನರಿಗೆ ಸಮಸ್ಯೆಯಾಗುವುದು ತಪ್ಪುತ್ತದೆ. ಜಲಾಶಯ ತುಂಬಿ ಕೋಡಿ ಮೂಲಕ ನೀರು ಹರಿದು ಹಿರಿಯೂರು ತಾಲ್ಲೂಕಿಗೆ ಹೋಗುತ್ತದೆ. ಅದನ್ನು ನೋಡಿ ಖುಷಿ ಪಡುವವರು ಹಿನ್ನೀರಿನಲ್ಲಿ ತೊಂದರೆ ಆದಾಗ ನೋಡಲು ಯಾರೂ ಬರುವುದಿಲ್ಲ. ಕೋಡಿ ನೀರು ಬರುವ ಸಮೀಪ ಸೇತುವೆ ಹಾಕಲಾಗಿದ್ದು ₹ 35 ಕೋಟಿ ವೆಚ್ಚದಲ್ಲಿ ಸೇತುವೆ ಅಭಿವೃದ್ಧಿ ಪಡಿಸುತ್ತೇವೆ. ವಿವಿ ಸಾಗರದ ಕೋಡಿಯನ್ನು 130 ಅಡಿಗೆ ನಿಲ್ಲಿಸಬೇಕು. ₹ 200 ಕೋಟಿ ವೆಚ್ಚದಲ್ಲಿ ಕೋಡಿ ಬಾಯಿಗೆ ಗೇಟ್ ಅಳವಡಿಸಲಾಗುವುದು’ ಎಂದು ಬಿ.ಜಿ. ಗೋವಿಂದಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.