ಮಂಗಳವಾರ, ಮಾರ್ಚ್ 9, 2021
23 °C

ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಚಿರತೆ ಪ್ರತ್ಯಕ್ಷ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಯಕನಹಟ್ಟಿ: ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಶೋಧನಾ ಕೇಂದ್ರದ ಆವರಣದಲ್ಲಿ ವಾರದಿಂದ ಚಿರತೆ ಓಡಾಡುತ್ತಿದ್ದು, ಇಲ್ಲಿನ ಸಿಬ್ಬಂದಿ ಮತ್ತು ತರಬೇತಿ ಯಲ್ಲಿರುವ ಶಿಕ್ಷಕರಲ್ಲಿ ಭಯ ಆವರಿಸಿದೆ.

ಸಂಶೋಧನಾ ಕೇಂದ್ರದ ಹೊಸ ಕ್ಯಾಂಪಸ್‌ನಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ಆರಂಭಗೊಂಡಿದೆ. ವಾರದಿಂದ ಚಿರತೆಯೊಂದು ಪ್ರತ್ಯಕ್ಷವಾಗುತ್ತಿದ್ದು, ಆವರಣದಲ್ಲಿದ್ದ ನಾಯಿಯೊಂದನ್ನು ಬೇಟೆಯಾಡಿದೆ. ಹೀಗಾಗಿ ಕ್ಯಾಂಪಸ್‌ನಲ್ಲಿ ಸಂಜೆಯಾದರೆ ನೀರವ ಮೌನ ಆವರಿಸುತ್ತಿದೆ. ಬೈಕ್‌ಗಳಲ್ಲಿ ಓಡಾಡಲು ಸಿಬ್ಬಂದಿ ಹಾಗೂ ತರಬೇತಿ ನಿರತ ಶಿಕ್ಷಕರು ಆತಂಕಗೊಂಡಿದ್ದಾರೆ.

‘ಸಂಶೋಧನಾ ಕೇಂದ್ರದ ಆವರಣದಲ್ಲಿ ಮೊಲ, ಜಿಂಕೆ, ನವಿಲು, ಕೃಷ್ಣಮೃಗ ಕಾಡುಹಂದಿ ಸೇರಿ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಚಿರತೆಗೆ ಉತ್ತಮ ಆಹಾರ ದೊರೆಯುತ್ತಿರುವ ಸ್ಥಳವಾಗಿದ್ದು, ಹಲವು ದಿನಗಳಿಂದ ಇಲ್ಲೇ ಬೀಡು ಬಿಟ್ಟಂತಿದೆ. ತುರ್ತಾಗಿ ಚಿರತೆಯನ್ನು ಹಿಡಿದು ಸಿಬ್ಬಂದಿ ಭಯವನ್ನು ಹೋಗಲಾಡಿಸಬೇಕು’ ಎಂದು ಐಐಎಸ್‌ಸಿ ಎಂಜಿನಿಯರ್ ಹೇಮಂತ್ ಅವರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು