ಮಂಗಳವಾರ, ಜನವರಿ 21, 2020
18 °C

‘ಮೀಸೆ ಹೆಂಗಸು...’ ಕೃತಿ ಬಿಡುಗಡೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸಾಹಿತಿ ಡಾ.ಲೋಕೇಶ್‌ ಅಗಸನಕಟ್ಟೆ ಅವರ ‘ಮೀಸೆ ಹೆಂಗಸು ಮತ್ತು ಇತರ ಕಥೆಗಳು’ ಕೃತಿ ಲೋಕಾರ್ಪಣೆ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಜ.13ರಂದು ಸಂಜೆ 6.30ಕ್ಕೆ ನಡೆಯಲಿದೆ.

ನಟಿ, ಸಂಸದೆ ಬಿ.ಜಯಶ್ರೀ ಅವರು ಕೃತಿ ಲೋಕಾರ್ಪಣೆ ಮಾಡಲಾಗಿದ್ದಾರೆ. ನಾಟಕಕಾರ ಕೆ.ವೈ.ನಾರಾಯಣಸ್ವಾಮಿ ಕೃತಿ ಕುರಿತು ಮಾತನಾಡಲಿದ್ದಾರೆ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಕಾರ್ಯಕ್ರಮದ ಬಳಿಕ ಅಕ್ಕಮಹಾದೇವಿ ಕುರಿತ ‘ನೀವು ಕಾಣಿರೇ’ ನಾಟಕ ಪ್ರದರ್ಶನಗೊಳ್ಳಲಿದೆ. ನಾರಾಯಣಸ್ವಾಮಿ ಅವರ ನಾಟಕವನ್ನು ಬಿ.ಜಯಶ್ರೀ ನಿರ್ದೇಶಿಸಿದ್ದಾರೆ ಎಂದು ಸಾಣೇಹಳ್ಳಿ ಮಠದ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು