ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿಯಲ್ಲಿ ಹೆಣ್ಣು–ಗಂಡು ಸಮಾನ: ಪದ್ಮಶ್ರೀ ಪುರಸ್ಕೃತ ವೈದ್ಯೆ ಡಾ.ಕಾಮಿನಿ ರಾವ್

Last Updated 9 ಮಾರ್ಚ್ 2022, 5:17 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಎಲ್ಲ ಕ್ಷೇತ್ರದಲ್ಲೂ ಸ್ತ್ರೀಯರಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರುವುದು ಸಮಾಜದ ಬದಲಾವಣೆಯ ಸಂಕೇತವಾಗಿದೆ. ಹೆಣ್ಣು ಮಕ್ಕಳಿಗೆ ಉದ್ಯೋಗ ಕಲ್ಪಿಸಿದರೆ ಇಡೀ ಕುಟುಂಬ ಸುಕ್ಷಿತವಾಗುತ್ತದೆ’ ಎಂದು ಪದ್ಮಶ್ರೀ ಪುರಸ್ಕೃತ ವೈದ್ಯೆ ಡಾ.ಕಾಮಿನಿ ರಾವ್ ಅಭಿಪ್ರಾಯಪಟ್ಟರು.

ಇಲ್ಲಿನ ಮುರುಘಾ ಮಠದ ಅನುಭವ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಅನಾದಿ ಕಾಲದಿಂದಲೂ ಕುಟುಂಬಗಳಲ್ಲಿ ಗಂಡುಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹವಿದೆ. ಈಗ ಹೆಣ್ಣುಮಕ್ಕಳಿಗೂ ಮನ್ನಣೆ ಸಿಗುತ್ತಿದೆ. ಗಂಡು ಮತ್ತು ಹೆಣ್ಣಿಗೆ ಬುದ್ಧಿಮಟ್ಟದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇಬ್ಬರನ್ನೂ ಸಮಾನವಾಗಿ ಕಾಣಬೇಕು’ ಎಂದರು.

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘ಮಹಿಳೆ ಎಂಬ ಶಬ್ದದಲ್ಲಿ ಇಳೆ ಇದೆ. ಮಳೆ ಇದೆ. ಇವೆರಡೂ ಸೇರಿದರೆ ಮಹಿಳೆ. ಇವಿಲ್ಲದೆ ಜಗತ್ತಿಗೆ ಅಸ್ತಿತ್ವವೇ ಇಲ್ಲ. ಹಾಗಾಗಿ ಮಹಿಳೆ ಎಂಬ ಪದ ಸಾರ್ಥಕವಾದುದು’ ಎಂದರು.

‘ಬಸವಣ್ಣನವರುಹೆಣ್ಣಿಗೆ ಎಲ್ಲ ರೀತಿಯ ಸ್ವಾತಂತ್ರ್ಯ ಕೊಟ್ಟರು. ಮಹಿಳೆಯರಲ್ಲಿ ಮಮತೆ ಎದ್ದುಕಾಣುತ್ತದೆ. ಜಗತ್ತನ್ನು ಆಳುವಂತಹ ವ್ಯಕ್ತಿಯನ್ನು ಮಹಿಳೆ ಆಳುತ್ತಾಳೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ‘ಮೊದಲು ನಾವು ಹೆಣ್ಣನ್ನು ಗೌರವಿಸಬೇಕು. ಎಲ್ಲರೂ ಗೌರವದಿಂದ ಕಂಡಾಗ ಸಮಾಜದಲ್ಲಿ ಅಪರಾಧಗಳು ಕಡಿಮೆಯಾಗುತ್ತವೆ’ ಎಂದರು.

ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕಿ ಎಸ್‌. ಸವಿತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ನಂದಿನಿದೇವಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಭೂಮಿಕಾ, ಸಹಾಯಕ ಪ್ರಾಧ್ಯಾಪಕಿ ಜಿ.ಒ. ಅಪೂರ್ವ, ವಿಜಯಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT