ಭಾನುವಾರ, ಮೇ 16, 2021
22 °C

ಹಲವು ಗುರುಗಳ ನೀಚ ಕೆಲಸ ಬಯಲಾಗಿಲ್ಲ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ‘ಒಬ್ಬ ಗುರು ಮಾಡಿದ ನೀಚ ಕೆಲಸ ಮಾತ್ರ ಬಯಲಾಗಿದೆ. ಬಯಲಿಗೆ ಬಾರದೇ ಇರುವ ಹಲವು ಗುರುಗಳು ಸಮಾಜದಲ್ಲಿ ಇದ್ದಾರೆ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಕ್ಷೇಪಿಸಿದರು.

ಶುಕ್ರವಾರ ಪಟ್ಟಣದ ಹಳೆಯ ಪ್ರವಾಸಿ ಮಂದಿರದ ಆವರಣದಲ್ಲಿ ನಿರ್ಮಾಣಗೊಂಡ ಕನ್ನಡ ಭವನ ಲೋಕಾರ್ಪಣೆ ಹಾಗೂ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಅಜ್ಞಾನಿಯಾದಲ್ಲಿ ಸಮಾಜಮುಖಿ ಕೆಲಸ ಮಾಡಲು ಸಾಧ್ಯವಿಲ್ಲ. ಆತ ಪರಮ ನೀಚನಾಗದೇ, ಪರಮಪ್ರೇಮಿಯಾಗಬೇಕು. ಮನೆ, ಮಠ, ಊರುಗಳಲ್ಲಿ ಸನ್ಮಾರ್ಗ ತೋರಿಸುವ ಕೆಲಸ ಕಣ್ಮರೆಯಾಗುತ್ತಿದೆ. ವಿವೇಕಿಗಳು ಇಲ್ಲದಿರುವುದರಿಂದ ಸಮಾಜ ದುಃಸ್ಥಿತಿಯತ್ತ ಸಾಗುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರಸಾದಕ್ಕೆ ವಿಷ ಹಾಕಿಸಿದ ಸ್ವಾಮೀಜಿ ಅಯೋಗ್ಯ’
‘ದೇವಸ್ಥಾನದ ಪ್ರಸಾದಕ್ಕೆ ವಿಷ ಹಾಕಿಸಿದ ಸ್ವಾಮೀಜಿ ಅಯೋಗ್ಯ. ಆತ ಓದಿಕೊಂಡು ಬಂದವನಲ್ಲ. ಮೇಕೆಗೆ ಇರುವ ಸಾಮಾನ್ಯ ಗುಣ ಆತನಿಗಿಲ್ಲ’ ಎಂದು ಕೆಲ್ಲೋಡು ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಕಿಡಿಕಾರಿದರು.

ಇಂತಹ ನೀಚ ಕೆಲಸ ಮಾಡುವವರು ಇರುವುದರಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸುವಾಗ ಕಣ್ಗಾವಲಾಗಿ ಕಾಯಬೇಕಿದೆ. ಹಾಗೆಯೇ, ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತಹ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು