ಶನಿವಾರ, ನವೆಂಬರ್ 26, 2022
23 °C
ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಅಭಿಮತ

ಶೋಷಿತ ಸಮುದಾಯಕ್ಕೆ ಮಠವೇ ತಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರಾಜ್ಯದ ಶೋಷಿತ ಸಮುದಾಯಗಳಿಗೆ ಮುರುಘಾ ಮಠವೇ ತಾಯಿ ಇದ್ದಂತೆ. ಮಠ ಜನಕಲ್ಯಾಣ ಬಯಸಿದೆ ಎಂದು ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಮುರುಘಾ ಮಠದ ಅನುಭವ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಮಾರಂಭದಲ್ಲಿ ಒಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.

‘ಮಠ ಎಂದರೆ ಪರಂಪರೆ, ತಾಯಿ ಹಾಗೂ ಸರ್ವಾಂಗೀಣ ಪ್ರಗತಿ. ಮಠದಿಂದ ಎಲ್ಲ ಸಾಧನೆಗಳನ್ನು ಮಾಡಲು ಸಾಧ್ಯವಿದೆ. ಜನಕಲ್ಯಾಣ ಬಯಸುತ್ತ ನಿರಂತರವಾಗಿ ಮೂರು ದಶಕಗಳಿಂದ ಸಾಮೂಹಿಕ ವಿವಾಹ ಮಹೋತ್ಸವ ನಡೆಸಲಾಗುತ್ತಿದೆ. ಇಂತಹ ಮದುವೆಗಳು ಸಾಮಾಜಿಕ ಸಾಮರಸ್ಯ, ಆರ್ಥಿಕ ಸಮಾನತೆ ತರುವ ಮಾರ್ಗ’ ಎಂದು ನುಡಿದರು.

ದಾವಣಗೆರೆಯ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ‘ಭಾವೈಕ್ಯದ ಕೇಂದ್ರ ಸಾಮೂಹಿಕ ಕಲ್ಯಾಣ ಮಹೋತ್ಸವ. ಇದರಿಂದ ಆರ್ಥಿಕ ಹೊರೆಯನ್ನು ತಡೆಯಲು ಸಾಧ್ಯವಿದೆ. 33 ವರ್ಷದಲ್ಲಿ ಸುಮಾರು 20 ಸಾವಿರ ವಿವಾಹಗಳಾಗಿವೆ. ಅಮವಾಸ್ಯೆ, ರಾಹುಕಾಲ ಎನ್ನದೇ ಎಲ್ಲ ಸಂದರ್ಭದಲ್ಲಿಯೂ ವಿವಾಹ ನೆರವೇರಿಸಲಾಗಿದೆ’ ಎಂದರು.

ಚಿದರವಳ್ಳಿಯ ಶಿದ್ದರಹಳ್ಳಿ ಪಾರಮಾರ್ಥ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ‘ದುಂದುವೆಚ್ಚವನ್ನು ಕಡಿಮೆ ಮಾಡಲು ಮಠವು ಸಾಮೂಹಿಕ ವಿವಾಹ ಮಾಡುತ್ತಾ ಬಂದಿದೆ. ಆರ್ಥಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯವನ್ನು ಗುರುಗಳು ಮಾಡುತ್ತಾ ಬಂದಿದ್ದಾರೆ’ ಎಂದರು.

ಹೆಬ್ಬಾಳ ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶರಣ ಸಂಸ್ಕೃತಿ ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವಕುಮಾರ ಸ್ವಾಮೀಜಿ, ಕಾರ್ಯಾಧ್ಯಕ್ಷ ಎಸ್.ಲಿಂಗಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು