ಮೊಳಕಾಲ್ಮುರು: ತಾಲ್ಲೂಕಿನಾದ್ಯಂತ ಭಾನುವಾರ ಪೂರ್ತಿ ಸೋನೆ ಮಳೆಯಾಗಿದ್ದು, ಮನೆಯಿಂದಾಗಿ ಜನ ಹೊರಬಂದು ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ತೊಂದರೆ ಅನುಭವಿಸಿದರು.

4ರಿಂದ 5 ದಿನಗಳಿಂದಲೂ ಸೋನೆ ಮಳೆಯಾಗುತ್ತಿತ್ತು. ಆದರೆ, ಭಾನುವಾರ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ರೈತರು ಜಾನುವಾರುಗಳನ್ನು ಮೇಯಿಸಿಕೊಂಡು ಬರಲು ಕೂಡ ಮಳೆ ಅಡ್ಡಿಯಾಗಿದೆ. ಬಿತ್ತನೆ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಮುಂಚಿತವಾಗಿ ಬಿತ್ತನೆ ಮಾಡಿರುವ ಹೊಲಗಳಲ್ಲಿ ತುರ್ತಾಗಿ ಎಡೆಕುಂಟೆ ಹೊಡೆಯಬೇಕಿದೆ. ಮಳೆ ಬಿಡುವು ನೀಡದ ಕಾರಣ ತೊಂದರೆಯಾಗಿದ್ದು, ಮಳೆ ಬಿಡುವು ನೀಡಿದಲ್ಲಿ ಶೇಂಗಾ ಬೆಳೆಗೆ ಅನುಕೂಲವಾಗಲಿದೆ ಎಂದು ರೈತರು ತಿಳಿಸಿದ್ದಾರೆ.

ಪಟ್ಟಣವು ಗುಡ್ಡದ ತಪ್ಪಲಿನಲ್ಲಿದ್ದು, ಮೋಡಗಳು ಕೆಳಭಾಗದಲ್ಲಿ ತೇಲಿಕೊಂಡು ಹೋಗುತ್ತಿರುವ ಪರಿಣಾಮ ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ. ಗುಡ್ಡಗಾಡಿನಲ್ಲಿ ಸೀತಾಫಲ ಹಣ್ಣಿನ ಸೀಝನ್ ಆರಂಭವಾಗುತ್ತಿದ್ದು, ಮಳೆಯಿಂದ ಹಣ್ಣಿನ ಬೆಳವಣಿಗೆಗೆ ಅನುಕೂಲ ಮಾಡಿಕೊಟ್ಟಿದೆ ಎಂದು ವ್ಯಾಪಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.