ಹೊಸದುರ್ಗ: ತಾಲ್ಲೂಕಿನ ಸಣ್ಣಕಿಟ್ಟದಹಳ್ಳಿಯಲ್ಲಿ ಈಚೆಗೆ ನಡೆದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಹೊಸದುರ್ಗ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸಣ್ಣಕಿಟ್ಟದಹಳ್ಳಿಯ ಕೋಮಲ (25), ಗಿರೀಶ್ (26) ಹಾಗೂ ಮೂಡಲಗಿರಿಯಪ್ಪ (52) ಬಂಧಿತ ಆರೋಪಿಗಳು. ಅಕ್ರಮ ಸಂಬಂಧದ ವಿಚಾರವಾಗಿ ಚಿಕ್ಕಣ್ಣ ಎಂಬುವರನ್ನು ತಲೆಗೆ ಹೊಡೆದು, ಸೀರೆಯಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ.

ಮೇ 9 ರಂದು ಸಣ್ಣಕಿಟ್ಟದಹಳ್ಳಿ ಗ್ರಾಮದ ಪೂರ್ಣಿಮಾ ಅವರ ಪತಿ ಚಿಕ್ಕಣ್ಣ ಅವರನ್ನು ಕೊಲೆ ಮಾಡಿ, ಮೃತದೇಹವನ್ನು ತೋಟದಲ್ಲಿ ಎಸೆಯಲಾಗಿತ್ತು.

ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಟಿ.ಎಂ. ಶಿವಕುಮಾರ್, ಹೊಸದುರ್ಗ ಠಾಣೆ ಪಿಐ ಕೆ.ಟಿ. ರಮೇಶ್, ಶ್ರೀರಾಂಪುರ ಠಾಣೆ ಪಿಐ ಮಧು, ಪಿಎಸ್ಐ ಮಹೇಶ್ ಕುಮಾರ್, ಭೀಮನಗೌಡ ಪಾಟೀಲ್, ಶ್ರೀಶೈಲ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.