ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27ರಂದು ಮೈಲಾರಲಿಂಗೇಶ್ವರನ ಸರಪಳಿ ಪವಾಡ

Last Updated 7 ಅಕ್ಟೋಬರ್ 2020, 2:12 IST
ಅಕ್ಷರ ಗಾತ್ರ

ಹಿರಿಯೂರು: ನಗರದಲ್ಲಿ ಅ. 27ರಂದು ಮೈಲಾರಲಿಂಗೇಶ್ವರಸ್ವಾಮಿಯ ಸರಪಳಿ ಪವಾಡ ನಡೆಯಲಿದೆ ಎಂದು ತಹಶೀಲ್ದಾರ್ ಜಿ.ಎಚ್.ಸತ್ಯನಾರಾಯಣ ತಿಳಿಸಿದರು.

ನಗರದ ತೇರುಮಲ್ಲೇಶ್ವರಸ್ವಾಮಿ ದೇಗುಲದ ಆವರಣದಲ್ಲಿ ದಸರಾ ಆಚರಣೆ ಕಾರಣ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅ. 25ರಂದು ಆಯುಧಪೂಜೆ, 26ರಂದು ವಿಜಯದಶಮಿ ನಡೆಯಲಿದೆ. ಉತ್ಸವಗಳಲ್ಲಿ ಪಾಲ್ಗೊಳ್ಳುವ ಭಕ್ತರು ಅಂತರ ನಿರ್ವಹಣೆ ಮಾಡಬೇಕು. ಜತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಕೋವಿಡ್–19 ನಿರ್ಲಕ್ಷಿಸುವುದು ಸಲ್ಲ. ಸರ್ಕಾರದ ಸೂಚನೆಗಳನ್ನು ಎಲ್ಲರೂ ಪಾಲಿಸಬೇಕು ಎಂದು ಅವರು ಹೇಳಿದರು.

ಸಭೆಯಲ್ಲಿ ಪೌರಾಯುಕ್ತರಾದ ಲೀಲಾವತಿ, ಕಂದಾಯ ನಿರೀಕ್ಷಕ ಲಕ್ಷ್ಮಣ್, ಮುಖಂಡರಾದ ಜಿ.ಎಲ್.ಮೂರ್ತಿ, ಪ್ರಸನ್ನಕುಮಾರ್ ಜೋಯಿಸ್, ವೆಂಕಟೇಶ್, ಬಿ.ಸುಧಾಕರ್, ವಿಶ್ವನಾಥಾಚಾರ್, ಮಲ್ಲೇಶ್, ಭೋಜಣ್ಣ, ನಾಗರಾಜ್, ಜಗದೀಶ್ ಭಂಡಾರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT