ನಾಯಕನಹಟ್ಟಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ-45ರಲ್ಲಿ ಸೋಮವಾರ ನಡೆಯುವ ಸಂತೆಯ ನೋಟ
ಮದ್ಯದ ಬಾಟಲಿಗಳಿಂದ ಆವೃತವಾಗಿರುವ ಶ್ರೀರಾಂಪುರದ ತರಕಾರಿ ಮಾರುಕಟ್ಟೆ
ಜಿಲ್ಲೆಯಲ್ಲಿ ನಿರ್ಮಿಸಿರುವ ತರಕಾರಿ ಹಾಗೂ ಸಂತೆಕಟ್ಟೆಗಳು ರೈತರು ಹಾಗೂ ವ್ಯಾಪಾರಸ್ಥರಿಂದ ದೂರವಾಗಿವೆ. ಅವೈಜ್ಞಾನಿಕ ಸ್ಥಳದಲ್ಲಿ ನಿರ್ಮಾಣ ಮಾಡಿರುವುದೇ ಇದಕ್ಕೆ ಕಾರಣ. ನಿರ್ವಹಣೆಯಂತೂ ದೂರದ ಮಾತಾಗಿದೆ
ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ
ಮಳೆ ಬಂದರೆ ಸಂತೆ ಮೈದಾನದಲ್ಲಿ ವ್ಯಾಪಾರ ಮಾಡುವುದು ಕಷ್ಟವಾಗುತ್ತದೆ. ಇದರಿಂದ ಗ್ರಾಹಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಮಳೆ ಪ್ರಾರಂಭಕ್ಕೂ ಮುನ್ನವೇ ಅಧಿಕಾರಿಗಳು ಇತ್ತ ಗಮನಹರಿಸಿದರೆ ಉತ್ತಮ.
ಮಂಜುಳಾ ವ್ಯಾಪಾರಿ ಚಳ್ಳಕೆರೆ
ಮೈದಾನದ ಜಾಗದಲ್ಲಿ ಸಮಸ್ಯೆ ಇರುವ ಕಾರಣ ಸೊಪ್ಪು-ತರಕಾರಿಯನ್ನು ರಸ್ತೆ ಬೀದಿ ಬದಿಯಲ್ಲಿ ಇಟ್ಟು ಮಾರಾಟ ಮಾಡಿ ಜೀವನ ಮಾಡುತ್ತಿದ್ದೇವೆ. ಸಂತೆ ಮೈದಾನಕ್ಕೆ ಜನ ಬರುವುದಿಲ್ಲ. ಮೈದಾನ ಜಾಗವನ್ನು ವ್ಯಾಪಾರಿ ಸ್ನೇಹಿಗೊಳಿಸಬೇಕಿದೆ.
ಟಿ.ಲಿಂಗರಾಜು ವ್ಯಾಪಾರಿ ಚಳ್ಳಕೆರೆ
ಎಪಿಎಂಸಿಯಿಂದ ನಿರ್ಮಿಸಿರುವ ಹಳ್ಳಿ ಸಂತೆ ಕಟ್ಟೆಗಳನ್ನು ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹಸ್ತಾಂತರಿಸಲಾಗಿದೆ. ಅವುಗಳ ನಿರ್ವಹಣೆ ಹೊಣೆ ಅವರಿಗೆ ಸೇರಿರುತ್ತದೆ.