ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುತಿಪ್ಪೇರುದ್ರಸ್ವಾಮಿ ದೇಗುಲ: ಹುಂಡಿಯಲ್ಲಿ ₹38 ಲಕ್ಷ ಸಂಗ್ರಹ

Published 5 ಮಾರ್ಚ್ 2024, 13:00 IST
Last Updated 5 ಮಾರ್ಚ್ 2024, 13:00 IST
ಅಕ್ಷರ ಗಾತ್ರ

ನಾಯಕನಹಟ್ಟಿ : ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ನಾಲ್ಕು ತಿಂಗಳ ನಂತರ ಹುಂಡಿ ಎಣಿಕೆ ಕಾರ್ಯವನ್ನು ದೇವಾಲಯದ ಆವರಣದಲ್ಲಿ ಕೆನರಾಬ್ಯಾಂಕ್, ಕಂದಾಯ ಮತ್ತು ಧಾರ್ಮಿಕ ದತ್ತಿ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ಮಂಗಳವಾರ ನಡೆಸಲಾಯಿತು.

ಮೊದಲು ಹೊರಮಠ ದೇವಾಲಯದಲ್ಲಿ ತಹಶೀಲ್ದಾರ್ ಹಾಗೂ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ನೇತೃತ್ವದಲ್ಲಿ ಬೆಳಗ್ಗೆ 9 ಗಂಟೆಗೆ ಆರಂಭವಾದ ಎಣಿಕೆ ಕಾರ್ಯ 12 ಗಂಟೆಗೆ ಮುಕ್ತಾಯವಾಯಿತು. ನಂತರ ಒಳಮಠದಲ್ಲಿ ಆರಂಭವಾದ ಎಣಿಕೆ ಕಾರ್ಯ ಮಧ್ಯಾಹ್ನ 4ಗಂಟೆಗೆ ಮುಕ್ತಾಯವಾಯಿತು. 

ಹೊರಮಠದಲ್ಲಿ ₹6,00,595 ಹಾಗೂ ಒಳಮಠದಲ್ಲಿ ₹32,67,065 ಸೇರಿ, ₹38,67,660 ಹಣ ಸಂಗ್ರಹವಾಗಿದೆ. ಇದೇ ತಿಂಗಳ 26ರಂದು ವಾರ್ಷಿಕ ಮಹಾಜಾತ್ರೆಯು ನಡೆಯುವ ಹಿನ್ನೆಲೆಯಲ್ಲಿ ಹುಂಡಿಯನ್ನು ತೆರೆಯಲಾಗಿದೆ. ದೇವಾಲಯದ ಖಾತೆ ಇರುವ ಕೆನರಾಬ್ಯಾಂಕ್‌ಗೆ ಹಣ ಜಮಾ ಮಾಡಲಾಯಿತು.

ಕಾರ್ಯನಿರ್ವಹಣಾಧಿಕಾರಿ ಎಚ್.ಗಂಗಾಧರಪ್ಪ, ಉಪತಹಶೀಲ್ದಾರ್ ಬಿ.ಶಕುಂತಲ, ಕಂದಾಯ ನಿರೀಕ್ಷಕ ಚೇತನ್‌ಕುಮಾರ್, ಕಂದಾಯ ಇಲಾಖೆ ಸಿಬ್ಬಂದಿ ಜಗದೀಶ್, ಪ್ರಕಾಶ್, ಶರಣಬಸವ, ಶಂಕರ್, ಕೆನರಾಬ್ಯಾಂಕ್ ವ್ಯವಸ್ಥಾಪಕ ಸತ್ಯನಾರಾಯಣ, ಸಿಬ್ಬಂದಿ ವಿರೂಪಾಕ್ಷಿ, ರಘುಕಾಮೂರ್ತಿ, ಕೆ.ಎಚ್‌.ಚೇತನ, ಸಿಬ್ಬಂದಿ ಸಕ್ಲೈನ್, ಎಂ.ಬಿ.ಮಹಾಸ್ವಾಮಿ, ಬ್ಯಾಂಕ್‌ ಮಿತ್ರರಾದ ಕೆ.ಎಂ.ಪ್ರಸನ್ನಕುಮಾರ್, ಪುರಂದರ, ವೀರಭದ್ರಪ್ಪ, ರಾಜಣ್ಣ, ದೇವಾಲಯ ಸಿಬ್ಬಂದಿ ಎಸ್.ಸತೀಶ್, ಮಂಜುನಾಥ್, ರುದ್ರೇಶ್, ಶಿವಕುಮಾರ್, ಶಂಕರಪ್ಪ ಸೇರಿದಂತೆ ಕಂದಾಯ ಇಲಾಖೆ, ಮುಜರಾಯಿ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT