ಕಪ್ಪುಪಟ್ಟಿ ಪ್ರದರ್ಶನ ಇಲ್ಲ..
ಸಾರ್ವಜನಿಕ ಆಸ್ಪತ್ರೆ ಸೇರಿ ತಾಲ್ಲೂಕಿನ ಆಸ್ಪತ್ರೆಗಳಲ್ಲಿ ಸಿಬ್ಬಂದಿ ವೈದ್ಯರು ತಂತ್ರಜ್ಞರ ಕೊರತೆ ನೀಗಿಸುವುದು ಸೇರಿ ವಿವಿಧ ಬೇಡಿಕೆ ಮುಂದಿಟ್ಟು ಸಚಿವ ದಿನೇಶ್ ಗುಂಡೂರಾವ್ ಭೇಟಿ ವೇಳೆ ರೈತ ಸಂಘ ಹಮ್ಮಿಕೊಂಡಿದ್ದ ಕಪ್ಪುಪಟ್ಟಿ ಪ್ರದರ್ಶನವನ್ನು ಕೊನೆ ಸಮಯದಲ್ಲಿ ಹಿಂದಕ್ಕೆ ಪಡೆಯಲಾಯಿತು. ಅಧಿಕಾರಿಗಳು ಪೊಲೀಸರು ಸಮಸ್ಯೆ ಬಗ್ಗೆ ಸಚಿವರಿಗೆ ಮನವರಿಕೆ ಮಾಡಲಾಗುವುದು ಎಂದು ಹೇಳಿದ ಕಾರಣ ವಾಪಸ್ ಪಡೆದು ಹಾನಗಲ್‌ನಲ್ಲಿ ಮನವಿ ಸಲ್ಲಿಸಿದರು. ಮುಖಂಡರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮರ್ಲಹಳ್ಳಿ ರವಿಕುಮಾರ್ ಇದ್ದರು.