ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಶೇಂಗಾ ಕಟಾವಿಗೆ ನೂತನ ಯಂತ್ರ

ಸಮಯ, ಹಣ ಉಳಿತಾಯ, ಕಾರ್ಮಿಕರ ಸಮಸ್ಯೆಗೆ ಪರ್ಯಾಯ
Last Updated 13 ನವೆಂಬರ್ 2020, 2:04 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಶೇಂಗಾ ಕಟಾವಿಗೆ ಕೃಷಿ ಇಲಾಖೆ ನೂತನ ಯಂತ್ರವನ್ನು ಪರಿಚಯಿಸಿದೆ.

ಕೂಲಿ ಕಾರ್ಮಿಕರ ಸಮಸ್ಯೆ ಹಾಗೂ ದುಬಾರಿ ಕೂಲಿ ವ್ಯವಸ್ಥೆಯಿಂದಾಗಿ ಶೇಂಗಾ ಬಿತ್ತನೆಯಿಂದ ಹಿಡಿದು ಕಟಾವಿನ ತನಕ ದುಬಾರಿ ಬೆಳೆಯಾಗಿ ಹೊರಹೊಮ್ಮಿದೆ. ಜತೆಗೆ ಬಿತ್ತನೆಬೀಜ, ರಸಗೊಬ್ಬರ ಬೆಲೆ ಸಹ ಆಕಾಶಕ್ಕೆ ಮುಟ್ಟಿರುವ ಕಾರಣ ಶೇಂಗಾ ಬೆಳೆ ಸಹವಾಸ ಸಾಕು ಎಂದು ವಿಮುಖರಾಗುತ್ತಿರುವ ಸ್ಥಿತಿಯಲ್ಲಿ ಹೊಸ ಕಟಾವು ಯಂತ್ರ ತುಸು ಸಮಾಧಾನ ಮೂಡಿಸಿದೆ.

‘ಒಂದು ಎಕರೆಯಲ್ಲಿ ಬೆಳೆದ ಶೇಂಗಾ ಕಟಾವು ಮಾಡಲು (ಮಳೆಬಾರದಿದ್ದಲ್ಲಿ) 10ರಿಂದ 12 ಕೂಲಿ ಆಳುಗಳು ಬೇಕು. ಕಟಾವಿಗೆ ಒಂದು ದಿನ ಹಿಡಿತಯುತ್ತದೆ. ಪ್ರತಿ ಎಕರೆಗೆ ₹ 3 ಸಾವಿರದಿಂದ ₹ 4 ಸಾವಿರ ಖರ್ಚು ಬರುತ್ತದೆ. ಆದರೆ, ಕಟಾವು ಯಂತ್ರ ಒಂದು ಗಂಟೆಯಲ್ಲಿ ಒಂದು ಎಕರೆ ಬೆಳೆಯನ್ನು ಕಟಾವು ಮಾಡುತ್ತದೆ. ಇದಕ್ಕೆ ಟ್ರ್ಯಾಕ್ಟರ್ ಸೇರಿ ₹ 900 ನಿಗದಿ ಮಾಡಲಾಗಿದೆ. ನೋಡಿಕೊಳ್ಳಲು ಒಬ್ಬ ಕಾರ್ಮಿಕ ಸಾಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಗಿರೀಶ್ ಮಾಹಿತಿ ನೀಡಿದರು.

‘ಈ ತಂತ್ರಜ್ಞಾನದಲ್ಲಿ ಬಳ್ಳಿ ಸ್ವಚ್ಛವಾಗಿ ಕೈ ಸೇರುತ್ತದೆ. ಕಾಯಿ ಕಟಾವು ಉತ್ತಮವಾಗಿ ಆಗುತ್ತದೆ. ಟ್ರ್ಯಾಕ್ಟರ್ ಬಳಸುವ ಕಾರಣ ಮಾಗಿ ಉಳುಮೆ ಮಾಡಿದಂತಾಗುತ್ತದೆ. ಜತೆಗೆ ಹಣ, ಸಮಯ ಉಳಿತಾಯವಾಗುತ್ತದೆ. ಕೂಲಿ ಕಾರ್ಮಿಕರ ಸಮಸ್ಯೆಯನ್ನೂ ನೀಗಿಸುತ್ತದೆ. ತಾಲ್ಲೂಕಿನ ಹಾನಗಲ್, ರಾಂಪುರ ಧರ್ಮಸ್ಥಳ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಯಂತ್ರ ಲಭ್ಯವಿದ್ದು, ಬಾಡಿಗೆ ಆಧಾರಲ್ಲಿ ಪಡೆಯಬಹುದು’ ಎಂದು ಹೇಳಿದರು.

ಬೇಡಿಕೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಯಂತ್ರಗಳನ್ನು ತರಿಸಿ ಇಡಲಾಗುವುದು. ಟ್ರ್ಯಾಕ್ಟರ್ ಹೊಂದಿರುವ ರೈತರು ಇಚ್ಚೆಪಟ್ಟಲ್ಲಿ ಯಂತ್ರವನ್ನು ತರಿಸಿ ಕೊಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT