ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಮುಸ್ಲಿಮರನ್ನು ಹೊರ ಹಾಕುವುದಿಲ್ಲ: ಕಲ್ಲಡ್ಕ ಪ್ರಭಾಕರ್‌ ಭಟ್‌

Last Updated 28 ಜನವರಿ 2020, 14:50 IST
ಅಕ್ಷರ ಗಾತ್ರ

ಚಿತ್ರದುರ್ಗ: ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶದಿಂದ ವಲಸೆ ಬಂದ ಹಿಂದೂಗಳಿಗೆ ಪೌರತ್ವ ನೀಡುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತರಲಾಗಿದೆ. ಇದು ಯಾರೊಬ್ಬರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ. ದೇಶದ ಮುಸ್ಲಿಮರನ್ನು ಹೊರ ಹಾಕುವುದಿಲ್ಲ ಎಂದು ಆರ್‌ಎಸ್‌ಎಸ್‌ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯಕಾರಿಣಿ ಸದಸ್ಯ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.

ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ಎಬಿವಿಪಿ) ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಯುವ ಚಿಂತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ನೆರೆಯ ರಾಷ್ಟ್ರಗಳಿಂದ ವಲಸೆ ಬಂದ ಹಿಂದೂಗಳಿಗೆ ಪೌರತ್ವ ನೀಡುವ ವಿಚಾರ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ದೇಶ ಆಳಿದ ರಾಜಕೀಯ ಪಕ್ಷಗಳು ಇವರನ್ನು ನಿರ್ಲಕ್ಷ್ಯ ಮಾಡಿದ್ದವು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ’ ಎಂದರು.

‘ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಜವಾಹರಲಾಲ್‌ ನೆಹರೂ ದೇಶವನ್ನು ಮೂರು ಭಾಗಗಳಾಗಿ ಕತ್ತರಿಸಲು ಅವಕಾಶ ಕಲ್ಪಿಸಿದರು. 70 ವರ್ಷದಲ್ಲಿ ಕೋಟ್ಯಂತರ ಹಿಂದೂಗಳು ಭಾರತಕ್ಕೆ ಬಂದಿದ್ದಾರೆ. ಇವರಿಗೆ ಮತದಾನದ ಹಕ್ಕು, ಪಡಿತರ ಚೀಟಿ ಕೂಡ ಸಿಕ್ಕಿಲ್ಲ. ಆದರೆ, ಈ ಅವಧಿಯಲ್ಲಿ ದೇಶದೊಳಗೆ ನುಸುಳಿದ ಐದು ಕೋಟಿ ಮುಸ್ಲಿಮರಿಗೆ ಪೌರತ್ವ ಸಿಕ್ಕಿದೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ ರಾಜಕಾರಣಕ್ಕೆ ಮುಸ್ಲಿಮರಿಗೆ ಸವಲತ್ತು ಸಿಕ್ಕಿವೆ’ ಎಂದು ಆರೋಪಿಸಿದರು.

‘ಪಾಕಿಸ್ತಾನದಂತಹ ಮತ್ತೊಂದು ದೇಶ ಸೃಷ್ಟಿಸಿಕೊಳ್ಳುವ ಉದ್ದೇಶದಿಂದ ಸಿಎಎ ವಿರೋಧಿಸಲಾಗುತ್ತಿದೆ. ನೊಂದು ಬಂದವರಿಗೆ ಭಾರತದ ಪೌರತ್ವ ನೀಡಿದರೆ ಇವರಿಗೇಕೆ ಸಿಟ್ಟು ಎಂಬುದು ಅರ್ಥವಾಗುತ್ತಿಲ್ಲ. ಈ ದೇಶದ ಹಿಂದೂ-ಮುಸ್ಲೀಮರನ್ನು ಎಲ್ಲಿಗೂ ಕಳಿಸುವುದಿಲ್ಲ. ನಿರಾಶ್ರಿತರಿಗೆ ಮಾತ್ರ ಪೌರತ್ವ ಕೊಡಲಾಗುವುದು. ದೇಶದಲ್ಲಿರುವ ಪ್ರತಿಯೊಬ್ಬರು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮಾಡಿಸುವುದು ಕಡ್ಡಾಯ’ ಎಂದು ಹೇಳಿದರು.

‘ಕ್ರಿಶ್ಚಿಯನ್‌ ಮಿಷನರಿಗಳು ಶಿಕ್ಷಣ ಹಾಗೂ ಧರ್ಮದ ಹೆಸರಿನಲ್ಲಿ ಹಿಂದೂಗಳನ್ನು ಮತಾಂತರ ಮಾಡುತ್ತಿವೆ. ಪಶ್ಚಿಮಾತ್ಯ ದೇಶಗಳ ಸಾಂಸ್ಕೃತಿಕ ವಿಕೃತಿಯನ್ನು ಭಾರತಕ್ಕೆ ತರಲು ಹವಣಿಸುತ್ತಿವೆ. ಮತಾಂತರ ನಡೆದರೆ ದೇಶಕ್ಕೆ ಗಂಡಾಂತರ ಎದುರಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಜಗತ್ತು ಕಂಡ ಅದ್ಬುತ ಸನ್ಯಾಸಿ ಸ್ವಾಮಿ ವಿವೇಕಾನಂದ. ಹಿಂದೂ ಧರ್ಮ, ಅಧ್ಯಾತ್ಮ, ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದರು. ಬೇರೆ ರಾಷ್ಟ್ರಗಳಲ್ಲಿ ಭಾರತದ ಮೂಲ ಚಿಂತನೆಯನ್ನು ಬಿತ್ತಿದರು. ಅವರ ತತ್ವಗಳನ್ನು ಯುವ ಪೀಳಿಗೆ ಸ್ಮರಿಸಿಕೊಳ್ಳಬೇಕಿದೆ’ ಎಂದು ಕಿವಿಮಾತು ಹೇಳಿದರು.

ಪೊಲೀಸ್‌ ಕಮಿಷನರ್‌ಗೆ ಅಭಿನಂದನೆ:ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಗೋಲಿಬಾರ್‌ ನಡೆಸಿ ಇಬ್ಬರನ್ನು ಬಲಿಪಡೆದ ಮಂಗಳೂರು ಪೊಲೀಸ್‌ ಕಮಿಷನರ್‌ ಡಾ.ಹರ್ಷ ಅವರನ್ನು ಪ್ರಭಾಕರ್‌ ಭಟ್‌ ಅಭಿನಂದಿಸಿದರು.

‘ಕೇಂದ್ರ ಸರ್ಕಾರ ಸಿಎಎ ಕಾಯ್ದೆ ಜಾರಿ ಮಾಡಿದ ತಕ್ಷಣ ದೇಶಾದ್ಯಂತ ಗಲಾಟೆ ನಡೆಯಿತು. ಮಂಗಳೂರಿನಲ್ಲು ಕೂಡ ಕಾಶ್ಮೀರದ ರೀತಿಯಲ್ಲೇ ಕಲ್ಲು ತೂರಾಟ ನಡೆಯಿತು. 53 ಪೊಲೀಸರು ಕಲ್ಲೇಟಿನಿಂದ ಗಾಯಗೊಂಡರು. ಇಂತಹ ಸಂದರ್ಭದಲ್ಲಿ ಗೋಲಿಬಾರ್‌ ನಡೆಸುವ ತೀರ್ಮಾನ ಕೈಗೊಂಡ ಡಾ.ಹರ್ಷ ಅವರನ್ನು ನೂರು ಬಾರಿ ಅಭಿನಂದಿಸಬೇಕು. ಇಬ್ಬರು ಭಯೋತ್ಪಾದಕರು ಬಲಿಯಾಗದೇ ಇದ್ದಿದ್ದರೆ ನಾವು ನೆಮ್ಮದಿಯಿಂದ ಇರಲು ಸಾಧ್ಯವಿರುತ್ತಿರಲಿಲ್ಲ’ ಎಂದು ಹೇಳಿದರು.

ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಜನಾರ್ದನ, ಮುಖಂಡರಾದ ಕೃತಿಕಾ ಜಯಪ್ರಕಾಶ್, ಚಂದ್ರಶೇಖರ ವೇದಿಕೆಯಲ್ಲಿದ್ದರು. ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ವಿಭಾಗೀಯ ಪ್ರಭಾರಿ ಜಿ.ಎಂ. ಸುರೇಶ್, ಮಾಜಿ ಅಧ್ಯಕ್ಷ ಸಿದ್ದೇಶ್ ಯಾದವ್ ಸೇರಿ ಅನೇಕರು ವೇದಿಕೆ ಮುಂಭಾಗ ಕುಳಿತಿದ್ದರು.

ಪೊಲೀಸ್‌ ಕಮಿಷನರ್‌ಗೆ ಅಭಿನಂದನೆ
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಗೋಲಿಬಾರ್‌ ನಡೆಸಿ ಇಬ್ಬರನ್ನು ಬಲಿಪಡೆದ ಮಂಗಳೂರು ಪೊಲೀಸ್‌ ಕಮಿಷನರ್‌ ಡಾ.ಹರ್ಷ ಅವರನ್ನು ಪ್ರಭಾಕರ್‌ ಭಟ್‌ ಅಭಿನಂದಿಸಿದರು.

‘ಕೇಂದ್ರ ಸರ್ಕಾರ ಸಿಎಎ ಕಾಯ್ದೆ ಜಾರಿ ಮಾಡಿದ ತಕ್ಷಣ ದೇಶಾದ್ಯಂತ ಗಲಾಟೆ ನಡೆಯಿತು. ಮಂಗಳೂರಿನಲ್ಲು ಕೂಡ ಕಾಶ್ಮೀರದ ರೀತಿಯಲ್ಲೇ ಕಲ್ಲು ತೂರಾಟ ನಡೆಯಿತು. 53 ಪೊಲೀಸರು ಕಲ್ಲೇಟಿನಿಂದ ಗಾಯಗೊಂಡರು. ಇಂತಹ ಸಂದರ್ಭದಲ್ಲಿ ಗೋಲಿಬಾರ್‌ ನಡೆಸುವ ತೀರ್ಮಾನ ಕೈಗೊಂಡ ಡಾ.ಹರ್ಷ ಅವರನ್ನು ನೂರು ಬಾರಿ ಅಭಿನಂದಿಸಬೇಕು. ಇಬ್ಬರು ಭಯೋತ್ಪಾದಕರು ಬಲಿಯಾಗದೇ ಇದ್ದಿದ್ದರೆ ನಾವು ನೆಮ್ಮದಿಯಿಂದ ಇರಲು ಸಾಧ್ಯವಿರುತ್ತಿರಲಿಲ್ಲ’ ಎಂದು ಹೇಳಿದರು.

*
ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯುವ ಸಮೂಹ ಕಳೆದು ಹೋಗಿದೆ. ಅತಿಯಾಗಿ ಮೊಬೈಲ್‌ ಬಳಸಿದರೆ ಮಿದುಳು ಕ್ಯಾನ್ಸರ್‌ ಬರುತ್ತದೆ. ಮೂವರು ಯುವಕರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ.
–ಬ್ರಹ್ಮನಿಷ್ಟಾನಂದ ಸ್ವಾಮೀಜಿ, ರಾಮಕೃಷ್ಣ ಆಶ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT